Saturday, April 17, 2021
Home ಅಂತರ್ ರಾಷ್ಟ್ರೀಯ ಮನುಷ್ಯರಿಗೂ H5N8 ಸೋಂಕು: ವಿಶ್ವದ ಮೊದಲ ಪ್ರಕರಣ ಪತ್ತೆ

ಇದೀಗ ಬಂದ ಸುದ್ದಿ

ಮನುಷ್ಯರಿಗೂ H5N8 ಸೋಂಕು: ವಿಶ್ವದ ಮೊದಲ ಪ್ರಕರಣ ಪತ್ತೆ

 ಮಾಸ್ಕೊ, ಫೆ.21: ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ಮನುಷ್ಯನಿಗೂ ಹರಡಿರುವ ವಿಶ್ವದ ಮೊಟ್ಟಮೊದಲ ಪ್ರಕರಣ ಬೆಳಕಿಗೆ ಬಂದಿದೆ ಎಂದು ರಶ್ಯ ಶನಿವಾರ ಪ್ರಕಟಿಸಿದೆ.

ರಶ್ಯದ ಆರೋಗ್ಯ ಕಣ್ಗಾವಲು ಸಮಿತಿಯ ಮುಖ್ಯಸ್ಥೆ ಅನ್ನಾ ಪೊಪೋವಾ ಈ ಬಗ್ಗೆ ಹೇಳಿಕೆ ನೀಡಿ, “ವಿಕ್ಟರ್ ಪ್ರಯೋಗಾಲಯದ ವಿಜ್ಞಾನಿಗಳು, ದಕ್ಷಿಣ ರಶ್ಯದ ಕೋಳಿ ಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿಯಲ್ಲಿ ಈ ಪ್ರಬೇಧವನ್ನು ಪತ್ತೆ ಮಾಡಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಇಲ್ಲಿ ಹಕ್ಕಿಜ್ವರ ವ್ಯಾಪಕವಾಗಿತ್ತು.

ಕಾರ್ಮಿಕರಲ್ಲಿ ಯಾವುದೇ ಗಂಭೀರ ಆರೋಗ್ಯ ಪರಿಣಾಮಗಳು ಕಂಡುಬಂದಿಲ್ಲ. ಪೌಲ್ಟ್ರಿಫಾರಂನಿಂದ ಅವರಿಗೆ ಸೋಂಕು ತಗಲಿರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಏವಿಯನ್ ಫ್ಲೂ (ಎಚ್5ಎನ್8) ಮನುಷ್ಯನಿಗೆ ಹರಡುವ ವಿಶ್ವದ ಮೊದಲ ಪ್ರಕರಣದ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಪೊಪೋವಾ ವಿವರಿಸಿದರು.

ಹಕ್ಕಿಗಳಿಗೆ ಮಾರಕವಾದ ಈ ಸೋಂಕು ಮನುಷ್ಯರಿಗೆ ಹರಡಿದ ಪ್ರಕರಣ ಇದುವರೆಗೆ ವರದಿಯಾಗಿರಲಿಲ್ಲ.

TRENDING