Tuesday, April 13, 2021
Home ಸುದ್ದಿ ಜಾಲ ಗುಜರಾತ್ ‌ನಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ಸ್ಥಾಪಿಸಲಿರುವ ಅಂಬಾನಿ ಕುಟುಂಬ

ಇದೀಗ ಬಂದ ಸುದ್ದಿ

ಗುಜರಾತ್ ‌ನಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ಸ್ಥಾಪಿಸಲಿರುವ ಅಂಬಾನಿ ಕುಟುಂಬ

 ಗುಜರಾತ್‌ನಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ನಿರ್ಮಾಣ ಮಾಡುತ್ತಿರುವ ಅಂಬಾನಿ ಕುಟುಂಬ, ಅಲ್ಲಿ ಕೊಮೋಡೋ ಡ್ರಾಗನ್‌ಗಳು, ಚೀತಾಗಳು ಹಾಗೂ ಥರಾವರಿ ಪಕ್ಷಿಗಳು ಸೇರಿದಂತೆ ಅತ್ಯಪರೂಪದ ವನ್ಯಜೀವಿಗಳನ್ನು ತರಲು ನೋಡುತ್ತಿದೆ.

2023ರ ವೇಳೆಗೆ ಈ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲಿದೆ ಎಂದು ರಿಲಯನ್ಸ್ ಸಮೂಹದ ಕಾರ್ಪೋರೇಟ್ ಅಫೇರ್ಸ್ ನಿರ್ದೇಶಕ ಪರಿಮಳ್ ನಾಥ್ವಾನಿ ತಿಳಿಸಿದ್ದಾರೆ. ಯೋಜನೆಯ ವೆಚ್ಚ ಹಾಗೂ ಇತರ ಮಾಹಿತಿಗಳನ್ನು ತಿಳಿಸಲು ರಿಲಯನ್ಸ್‌ ಪ್ರತಿನಿಧಿಗಳು ನಿರಾಕರಿಸಿದ್ದಾರೆ.

ಒಟ್ಟಾರೆ $80 ಶತಕೋಟಿಯಷ್ಟು ಆಸ್ತಿ ಹೊಂದಿರುವ ಅಂಬಾನಿ ಕುಟುಂಬವು ಏಷ್ಯಾದ ಅತ್ಯಂತ ಸಿರಿವಂತ ಕುಟುಂಬವಾಗಿದ್ದು ತನ್ನ ಜಾಲವನ್ನು ತಂತ್ರಜ್ಞಾನ ಹಾಗೂ ಇ-ಕಾಮರ್ಸ್‌ಗೂ ವ್ಯಾಪಿಸಿದೆ.

TRENDING