Tuesday, April 13, 2021
Home ಸುದ್ದಿ ಜಾಲ ಜೋಧ್ ಪುರ್ ದಲ್ಲಿ BSF ನ ಟ್ರಕ್ ಪಲ್ಟಿ:6 ಯೋಧರಿಗೆ ಗಾಯ

ಇದೀಗ ಬಂದ ಸುದ್ದಿ

ಜೋಧ್ ಪುರ್ ದಲ್ಲಿ BSF ನ ಟ್ರಕ್ ಪಲ್ಟಿ:6 ಯೋಧರಿಗೆ ಗಾಯ

 ಜೋಧ್ಪು​ರ್: ಸೇನೆಯ ಟ್ರಕ್ ಪಲ್ಟಿಯಾದ ಪರಿಣಾಮ ಆರು ಜನ ಬಿಎಸ್​ಎಫ್​ ಯೋಧರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್​ಪುರ್​ ಜಿಲ್ಲೆಯ ಫಲೋದಿಯಲ್ಲಿ ಶನಿವಾರ ನಡೆದಿದೆ.

ಗಾಯಾಳು ಯೋಧರನ್ನು ಫಲೋದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರಕ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಯೋಧರು ಟ್ರಕ್​ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ.

ಘಟನೆ ಬಳಿಕ ಆಸ್ಪತ್ರೆಗೆ ಬಿಎಸ್​ಎಫ್ ಅಧಿಕಾರಿಗಳು ಯೋಧರ ಆರೋಗ್ಯ ವಿಚಾರಿಸಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

TRENDING