ನವದೆಹಲಿ: ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಆಗದೇ ಇದ್ದರೇ ನೀವು ಬಯಸಿದರೆ, ನಿಮ್ಮ ಸೆಟ್ಟಿಂಗ್ ಗಳಿಗೆ ಅಗತ್ಯಬದಲಾವಣೆಗಳನ್ನು ಈಗಲೇ ಮಾಡಿಕೊಂಡು ಬಿಡಿ. ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ವಾಟ್ಸಾಪ್ ಖಾತೆಗಳ ಪ್ರವೇಶಪಡೆಯಲು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ ಅಂತ ಸೈಬರ್ ಭದ್ರತಾ ತಜ್ಞ ಝಾಕ್ ಡಾಫ್ ಮನ್ ಹೇಳಿದ್ದಾರೆ.ಅಂದ ಹಾಗೇ ಅವರು ಹೇಳಿರುವ ಪ್ರಕಾರ, ಹ್ಯಾಕರ್ ಗಳು ನಿಮ್ಮ ವಾಟ್ಸಾಪ್ ಡಿವೈಸ್ ಗೆ ಯಾವ ರೀತಿಯಲ್ಲಿ ರೀತಿ ಲಾಗಿನ್ ಆಗುತ್ತಾರೆ ಅಂತ ಸೈಬರ್ ತಜ್ಞ ಈ ವಿಧಾನವನ್ನು ವಿವರವಾಗಿ ವಿವರಿಸಿದ್ದಾರೆ.
ವಾಸ್ತವವಾಗಿ, ಹೊಸ ಡಿವೈಸ್ ನಲ್ಲಿ ನೀವು ವಾಟ್ಸಾಪ್ ಖಾತೆಗೆ ಲಾಗಿನ್ ಆದಾಗಲೆಲ್ಲ, ವಾಟ್ಸಾಪ್ ನಿಮ್ಮ ನೋಂದಾಯಿತ ಫೋನ್ ನಂಬರ್ ಗೆ ವೆರಿಫಿಕೇಶನ್ ಎಸ್ ಎಂಎಸ್ ಕಳುಹಿಸುತ್ತದೆ. ಅಕಸ್ಮಾತ್ ನಿಮ್ಮ ಫೋನ್ ವಂಚಕನ ಕೈಯಲ್ಲಿದ್ದರೆ ಮತ್ತು ನೀವು ಲಾಕ್ ಸ್ಕ್ರೀನ್ ನಲ್ಲಿ ಎಸ್ ಎಂಎಸ್ ನ ಮುನ್ನೋಟವನ್ನು (ಪಾಪ್ಅಪ್) ಹೊಂದಿದ್ದರೆ, ನೀವು ತುಂಬಾ ಅಪಾಯದಲ್ಲಿರಬಹುದು ಅಂತ ಹೇಳಿದೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಹಲವಾರು ಮಾಲ್ ವೇರ್ ಗಳು ಹ್ಯಾಕರ್ ಗಳು ನಿಮ್ಮ ಫೋನ್ ನಲ್ಲಿ ಕುಳಿತು 6 ಅಂಕಿಗಳ ಕೋಡ್ ಅನ್ನು ಪಡೆಯುತ್ತಿದ್ದಾರೆ. ಈ ಕೋಡ್ ಅನ್ನು ನೀವು ನಮೂದಿಸಿದ ತಕ್ಷಣ ನಿಮ್ಮ ವಾಟ್ಸಾಪ್ ಖಾತೆಯು ಅವರ ಸಾಧನಕ್ಕೆ ಲಾಗ್ ಆನ್ ಆಗುತ್ತದೆ. ನಿಮ್ಮ ಖಾತೆಯನ್ನು ಬಳಸಿಕೊಂಡು ವಂಚಕರು ನಿಮ್ಮ ಹತ್ತಿರದ ಜನರಿಂದ ಹಣ ಕೇಳಬಹುದು. ಈ ಬಗ್ಗೆ ಕಳೆದ ವರ್ಷ Express.co.uk ವರದಿಯಲ್ಲಿ ಈ ಹಗರಣ ವನ್ನು ಬಹಿರಂಗಪಡಿಸಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಇಂತಹ ಘಟನೆಗಳು ಗಣನೀಯವಾಗಿ ಹೆಚ್ಚಿವೆ. ಆದರೆ, ವಾಟ್ಸ್ ಆಪ್ ಸೆಟ್ಟಿಂಗ್ ಮೂಲಕ ಈ ತೊಂದರೆಯನ್ನು ತಪ್ಪಿಸಬಹುದಾಗಿದೆ.
ಈ ವಾಟ್ಸ್ ಆಪ್ ಸೆಟ್ಟಿಂಗ್ಸ್ ಗ್ರೇಟ್ ವರ್ಕ್ ಆಗುತ್ತದೆ
ವಾಟ್ಸಾಪ್ ನಲ್ಲಿ ಬಳಕೆದಾರರಿಗೆ ಟು-ಸ್ಟೆಪ್ ವೆರಿಫಿಕೇಶನ್ ಎಂಬ ಫೀಚರ್ ನೀಡಲಾಗಿದೆ. ನೀವು 6 ಅಂಕಿಗಳ ಕೋಡ್ ಅನ್ನು ಹೊಂದಿಸ ಬೇಕಾಗಿದೆ. ಈ ವೈಶಿಷ್ಟ್ಯದ ಪ್ರಯೋಜನವೆಂದರೆ ಹೊಸ ಡಿವೈಸ್ ನಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ನೀವು ಲಾಗಿನ್ ಮಾಡಿದಾಗಲೆಲ್ಲ, ಈ ಕೋಡ್ ಗಾಗಿ ನಿಮ್ಮನ್ನು ಕೇಳಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸು ವುದು ಹೀಗೆ
ಎರಡು ಹಂತದ ವೆರಿಫಿಕೇಶನ್ ಅನ್ನು ಸಕ್ರಿಯಗೊಳಿಸಲು ನೀವು ನಿಮ್ಮ ವಾಟ್ಸಾಪ್ ಅನ್ನು ತೆರೆಯಬೇಕು.
ನಂತರ ಸೆಟ್ಟಿಂಗ್ಸ್ ಗೆ ಹೋಗಿ ನಂತರ ಅಕೌಂಟ್ ಗೆ ಹೋಗಿ.
ಇಲ್ಲಿ ನೀವು ಎರಡು-ಸ್ಟೆಪ್ ವೆರಿಫಿಕೇಶನ್ ಎಂಬ ಆಯ್ಕೆಯನ್ನು ಕಾಣುತ್ತೀರಿ.
ಎನೇಬಲ್ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಆಯ್ಕೆಯ ಕೋಡ್ ಅನ್ನು ಹೊಂದಿಸಿ.