Sunday, February 28, 2021
Home ಕೋವಿಡ್-19 ರಾಜ್ಯದಲ್ಲಿ ಇಂದು 413 ಕೊರೋನಾ ಪ್ರಕರಣ ಪತ್ತೆ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಇಂದು 413 ಕೊರೋನಾ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿಂದು 413 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಬುಲೆಟಿನ್ನಲ್ಲಿ ಈ ಮಾಹಿತಿ ನೀಡಲಾಗಿದ್ದು ಇದರೊಡನೆ ಒಟ್ಟಾರೆ ಸೋಂಕಿತರ ಸಂಖ್ಯೆ 9,48,149ಕ್ಕೆ ಏರಿಕೆ ಕಂಡಿದೆ.

ಇಂದು ರಾಜ್ಯದಲ್ಲಿ ಇಬ್ಬರು ಕೊರೋನಾಗೆ ಬಲಿಯಾಗಿದ್ದು ಆ ಇಬ್ಬರೂ ಬೆಂಗಳೂರು ನಗರ ಜಿಲ್ಲೆಯವರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು 248 ಪ್ರಕರಣಗಳು ವರದಿಯಾಗಿದೆ.

ಇದುವರೆಗೆ ರಾಜ್ಯದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 12,294 ಇದ್ದು ಒಟ್ಟಾರೆ ಗುಣಮುಖವಾಗಿರುವವರ ಸಂಖ್ಯೆ 9,29,800 ಇದೆ.

 ರಾಜ್ಯದಲ್ಲಿ ಪ್ರಸ್ತುತ 6,036 ಸಕ್ರಿಯ ಕೋವಿಡ್ ಪ್ರಕರಣಗಳು ಇದ್ದು ಅವರ ಪೈಕಿ 127 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

TRENDING