Tuesday, April 13, 2021
Home ದೆಹಲಿ ದೆಹಲಿಯಲ್ಲಿ ದಾಖಲೆ ಮಟ್ಟಕ್ಕೇರಿದ ಪೆಟ್ರೋಲ್ ದರ

ಇದೀಗ ಬಂದ ಸುದ್ದಿ

ದೆಹಲಿಯಲ್ಲಿ ದಾಖಲೆ ಮಟ್ಟಕ್ಕೇರಿದ ಪೆಟ್ರೋಲ್ ದರ

ನವದೆಹಲಿ: ಭಾರತದಲ್ಲಿ ಶನಿವಾರವೂ ತೈಲೋತ್ಪನ್ನಗಳ ದರಗಳು ಏರಿಕೆ ಕಂಡಿದ್ದು, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 90 ರೂ ಗಡಿ ದಾಟಿದೆ.

ಭಾರತದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 37 ರಿಂದ 39 ಪೈಸೆಯಷ್ಟು ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 39 ಪೈಸೆ ಮತ್ತು ಡೀಸೆಲ್ ದರದಲ್ಲಿ 37 ಪೈಸೆ ಏರಿಕೆಯಾಗಿದೆ. ಆ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 90.58 ರೂ ಗೆ ಏರಿಕೆಯಾಗಿದ್ದು, ಡೀಸೆಲ್ ದರ ಕೂಡ 80.97ರೂ ಗೆ ಏರಿಕೆಯಾಗಿದೆ.

ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರದಲ್ಲಿ 40 ಪೈಸೆ ಏರಿಕೆಯಾಗಿದ್ದು, ಆ ಮೂಲಕ ಪ್ರತೀ ಲೀಟರ್ ಪೆಟ್ರೋಲ್ ದರ 93.59 ರೂಗೆ ಏರಿಕೆಯಾಗಿದೆ. ಇನ್ನು ಡೀಸೆಲ್ ದರ ಕೂಡ 39 ಪೈಸೆ ಏರಿಕೆಯಾಗಿದ್ದು ಪ್ರತೀ ಲೀಟರ್ ಪೆಟ್ರೋಲ್ ದರ 85.82 ರೂ ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 38 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಪೆಟ್ರೋಲ್ ದರ 96.98 ಏರಿಕೆಯಾಗಿದ್ದು, ಡೀಸೆಲ್ ದರ 40 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 88.05ರೂ ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ 92.58 ರೂಗೆ ಮತ್ತು ಡೀಸೆಲ್ 85.61 ರೂಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 91.76 ರೂಗೆ ಮತ್ತು ಡೀಸೆಲ್ 84.54 ರೂಗೆ ಏರಿಕೆಯಾಗಿದೆ.

TRENDING