Saturday, April 17, 2021
Home ಸುದ್ದಿ ಜಾಲ ಏರಿದ ತೈಲ ದರದಿಂದ ಕೈಗಾರಿಕೆಗಳಿಗೆ ಹೊಡೆತ

ಇದೀಗ ಬಂದ ಸುದ್ದಿ

ಏರಿದ ತೈಲ ದರದಿಂದ ಕೈಗಾರಿಕೆಗಳಿಗೆ ಹೊಡೆತ

 ಆಂಧ್ರ ಪ್ರದೇಶ : ಲ್ಯಾಂಡಿಂಗ್ ವೇಳೆ ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು (ಫೆ.20) ಗನ್ನಾವರಂನಲ್ಲಿರುವ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

64 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸಪ್ರೆಸ್ ಗೆ ಸೇರಿದ್ದ ವಿಮಾನ ಇಂದು ವಿಜಯವಾಡದಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮ ರನ್ ವೇಯಲ್ಲಿದ್ದ ವಿದ್ಯುತ್ ಕಂಬಕ್ಕೆ ವಿಮಾನ ಡಿಕ್ಕಿ ಹೊಡೆದಿದೆ.

ಕತಾರ್ ನ ದೊಹಾದಿಂದ ಈ ವಿಮಾನ ಆಗಮಿಸಿತ್ತು. ಲ್ಯಾಂಡಿಂಗ್ ವೇಳೆ ರನ್ ವೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ವಿಮಾನಿನ ರೆಕ್ಕೆ ತಾಗಿದೆ. ಪರಿಣಾಮ ವಿದ್ಯುತ್ ಕಂಬ ನೆಲಕ್ಕುರುಳಿದೆ. ರೆಕ್ಕೆಗೆ ಸ್ವಲ್ಪ ಹಾನಿಯಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವಿಜಯವಾಡ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಮಧುಸೂದನ್ ರಾವ್ ಹೇಳಿದ್ದಾರೆ.

ಇನ್ನು ಘಟನೆ ಕುರಿತು ತನಿಖೆ ನಡೆಸಲು ಸೂಚಿಸಿರುವುದಾಗಿ ಏರ್ ಇಂಡಿಯಾ ಎಕ್ಸಪ್ರೆಸ್ ತಿಳಿಸಿದೆ.

TRENDING