Saturday, April 17, 2021
Home ಸುದ್ದಿ ಜಾಲ Shocking: ರಷ್ಯಾದ ವ್ಯಕ್ತಿಯಲ್ಲಿ ಎಚ್ 5ಎನ್8 ಸೋಂಕು ಪತ್ತೆ

ಇದೀಗ ಬಂದ ಸುದ್ದಿ

Shocking: ರಷ್ಯಾದ ವ್ಯಕ್ತಿಯಲ್ಲಿ ಎಚ್ 5ಎನ್8 ಸೋಂಕು ಪತ್ತೆ

   ಕೊರೊನಾ ಸೋಂಕಿನ ಭೀತಿಯ ನಡುವೆ ಮತ್ತೊಂದು ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ರಷ್ಯಾದ ವ್ಯಕ್ತಿಯೊಬ್ಬನಲ್ಲಿ ಎಚ್ 5ಎನ್8 ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಮೊದಲ ಪ್ರಕರಣವನ್ನ ರಷ್ಯಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಶನಿವಾರ ಈ ಕುರಿತು ರಷ್ಯಾ, ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ‘ಮಾನವರಿಗೆ ಹಕ್ಕಿ ಜ್ವರ (ಎಚ್5ಎನ್8) ಹರಡುವ ವಿಶ್ವದ ಮೊದಲ ಪ್ರಕರಣದ ಕುರಿತು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ರವಾನಿಸಲಾಗಿದೆ’ ಎಂದು ರಷ್ಯಾ ತಿಳಿಸಿದೆ.

ಅತಿ ಹೆಚ್ಚು ಸಾಂಕ್ರಾಮಿಕ ರೋಗವು ಹಕ್ಕಿಗಳಿಗೆ ಮಾರಕವಾಗಿದೆ. ಆದರೆ, ಇದುವರೆಗೆ ಮಾನವರಿಗೆ ಹರಡುವ ಬಗ್ಗೆ ವರದಿಯಾಗಿರಲಿಲ್ಲ. ಈ ಮೂಲಕ ಮೊದಲ ಪ್ರಕರಣ ದಾಖಲಾಗಿದೆ.

TRENDING