‘ಇಂಧನಗಳ ಮೇಲೆ ವ್ಯಯಿಸುತ್ತಿರುವ ಹಣ ಉಳಿತಾಯ ಮಾಡುವುದಕ್ಕೆ ಹಾಗೂ ವಾಯುಮಾಲಿನ್ಯ ನಿಯಂತ್ರಿಸುವುದಕ್ಕೆ ವಿದ್ಯುತ್ ಚಾಲಿತ ವಾಹನಗಳು ಸಹಕಾರಿಯಾಗಲಿವೆ. ಹೀಗಾಗಿ ನಮ್ಮ ಇಲಾಖೆಯ ಎಲ್ಲಾ ಅಧಿಕಾರಿಗಳೂ ವಿದ್ಯುತ್ ಶಕ್ತಿಯ ಸಹಾಯದಿಂದ ಚಲಿಸುವ ವಾಹನಗಳನ್ನೇ ಬಳಸುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇನ್ನು ‘ದೆಹಲಿ ಒಂದರಲ್ಲಿ ಮಾತ್ರವೇ 10 ಸಾವಿರ ವಿದ್ಯುತ್ ಚಾಲಿತ ವಾಹನಗಳನ್ನ ಬಳಸಿದ್ರೆ ತಿಂಗಳಿಗೆ ಒಟ್ಟಾರೆ ಸುಮಾರು ₹30 ಕೋಟಿ ಉಳಿತಾಯ ಮಾಡಬಹುದು. ಇಂಧನದ ಮೇಲೆ ವ್ಯಯಿಸುವ ಇಷ್ಟು ದೊಡ್ಡ ಮಟ್ಟದ ಹಣ ಉಳಿತಾಯವಾಗುವ ಜೊತೆಗೆ ವಾಹನಗಳಿಂದ ಹೊರಹೊಮ್ಮಿ ಪರಿಸರಕ್ಕೆ ಹಾನಿ ಮಾಡುವ ಹೊಗೆಯನ್ನೂ ತಡೆಗಟ್ಟಬಹುದು. ಇದಕ್ಕಾಗಿ ನಾವು ವಿದ್ಯುತ್ ಶಕ್ತಿಯ ಸಹಾಯದಿಂದ ಚಲಿಸುವ ವಾಹನಗಳ ಬಳಕೆಗೆ ಹೆಚ್ಚು ಒತ್ತು ನೀಡಲಿದ್ದೇವೆ’ ಎಂದರು.