Tuesday, April 13, 2021
Home ಜಿಲ್ಲೆ ಜಿಲ್ಲಾ ಸುದ್ದಿ ಚನ್ನಪಟ್ಟಣದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಹಲವು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದೀಗ ಬಂದ ಸುದ್ದಿ

ಚನ್ನಪಟ್ಟಣದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಹಲವು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಕೇಂದ್ರೀಯ ವಿದ್ಯಾಲಯವು (ಕೆವಿ) ಹಲವಾರು ಹುದ್ದೆಗಳನ್ನು ಪ್ರಕಟಿಸಿದ್ದು, ಪಿಆರ್ ಟಿ, ಟಿಜಿಟಿ, ಪಿಜಿಟಿ ಮತ್ತು ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು 2021-22ನೇ ಸಾಲಿಗೆ ಅರೆಕಾಲಿಕ/ಗುತ್ತಿಗೆ ಆಧಾರದ ಮೇಲೆ ಭಾರತದ ವಿವಿಧ ಕೆವಿ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನ ಪ್ರಕ್ರಿಯೆಯನ್ನು ಆರಂಭಿಸಿದೆ. ಕೇಂದ್ರೀಯ ವಿದ್ಯಾಲಯ ನೇಮಕಾತಿ 2021ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾದ ವೇಳಾಪಟ್ಟಿ ಯ ಪ್ರಕಾರ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳು ಸಂದರ್ಶನದ ದಿನಾಂಕಗಳು, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಹುದ್ದೆಯ ವಿವರಗಳು, ಆಯ್ಕೆ ಪ್ರಕ್ರಿಯೆಯನ್ನು ಈ ಕೆಳಗೆ ನೀಡಲಾಗಿರುವ ಅಧಿಸೂಚನೆ ಲಿಂಕ್ ಗಳ ಮೂಲಕ ಪರಿಶೀಲಿಸಬಹುದು.

ಅಧಿಸೂಚನೆಗೆ ಇಲ್ಲಿರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ : https://bit.ly/2Zy0eDH
ಹೆಚ್ಚಿನ ಮಾಹಿತಿಗೆ: https://channapatna.kvs.ac.in

ನೇರ ಸಂದರ್ಶನ ನಡೆಯುವ ದಿನಾಂಕ: 24.2.2021
ಸಂದರ್ಶನ ನಡೆಯುವ ಸ್ಥಳ: ಕೇಂದ್ರೀಯ ವಿದ್ಯಾಲಯ ಆವರಣ, ಚನ್ನಪಟ್ಟಣ

TRENDING