Tuesday, April 13, 2021
Home ಸುದ್ದಿ ಜಾಲ ಬ್ರಾಹ್ಮಣರು, ವೈದಿಕ ಆಚರಣೆ ಕುರಿತ ವಿವಾದಿತ ಪಠ್ಯ ಕಡಿತಕ್ಕೆ ನಿರ್ಧಾರ

ಇದೀಗ ಬಂದ ಸುದ್ದಿ

ಬ್ರಾಹ್ಮಣರು, ವೈದಿಕ ಆಚರಣೆ ಕುರಿತ ವಿವಾದಿತ ಪಠ್ಯ ಕಡಿತಕ್ಕೆ ನಿರ್ಧಾರ

ಬೆಂಗಳೂರು: ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳ ಕುರಿತಾದ ವಿವಾದಿತ ಪಾಠಗಳನ್ನು ಪ್ರಸಕ್ತ ಸಾಲಿಗೆ ಕೈಬಿಡಲು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ತಿರ್ಮಾನಿಸಿದೆ.

ವೈದಿಕ ಆಚರಣೆಯಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು ಎಂಬುದು ಸೇರಿದಂತೆ ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳು ಕುರಿತ ವಿವಾದಕ್ಕೆ ಕತ್ತರಿ ಹಾಕಲಾಗುವುದು. ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ -1 ಧರ್ಮಗಳ ಉದಯ ಪಾಠದಲ್ಲಿ ಬ್ರಾಹ್ಮಣರ ಬಗ್ಗೆ ವೈದಿಕ ಆಚರಣೆ ಬಗ್ಗೆ ವಿವಾದಿತ ಅಂಶಗಳಿದ್ದು, ಇದನ್ನು ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಕೈಬಿಡಬೇಕೆಂದು ಬ್ರಾಹ್ಮಣ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಂಘಟನೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ವಿವಾದಾತ್ಮಕ ಪಠ್ಯ ಕೈಬಿಡಲಾಗುವುದು ಎಂದು ಹೇಳಲಾಗಿದೆ.

TRENDING