Saturday, April 17, 2021
Home ದೆಹಲಿ 2020ರಲ್ಲಿ ದೆಹಲಿಯಲ್ಲಿ 32 ಭಯೋತ್ಪಾದಕರ ಬಂಧನ

ಇದೀಗ ಬಂದ ಸುದ್ದಿ

2020ರಲ್ಲಿ ದೆಹಲಿಯಲ್ಲಿ 32 ಭಯೋತ್ಪಾದಕರ ಬಂಧನ

 ನವದೆಹಲಿ: 2020ನೇ ವರ್ಷದಲ್ಲಿ ದೆಹಲಿ ಪೊಲೀಸರು 32 ಉಗ್ರರನ್ನು ಬಂಧಿಸಿದ್ದಾರೆ. ಇದು 2016ರ ನಂತರ ಗರಿಷ್ಠ ಸಂಖ್ಯೆಯಾಗಿದೆ ಎಂದು ದೆಹಲಿ ಪೊಲೀಸ್ ತಿಳಿಸಿದೆ.

ದೆಹಲಿ ಪೊಲೀಸರು 2019ರಲ್ಲಿ ಐದು, 2018ರಲ್ಲಿ ಎಂಟು, 2017ರಲ್ಲಿ 11 ಮತ್ತು 2016ರಲ್ಲಿ 16 ಭಯೋತ್ಪಾದಕರನ್ನು ಬಂಧಿಸಿದ್ದರು.

ಕಳೆದ ವರ್ಷ ಐಸಿಸ್ ಉಗ್ರ ಕೇಂದ್ರವನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಉಗ್ರ ಚಟುವಟಿಕೆಗಳಿಗೆ ಮಟ್ಟ ಹಾಕುವಲ್ಲಿ ಯಶ ಕಂಡಿದೆ.

ಪಾಕಿಸ್ತಾನವು ಜಿಹಾದ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಅಲ್‌ಖೈದಾ ಮುಂದಾಳತ್ವದಲ್ಲಿ ಭಾರತದ ನಕಲಿ ಕರೆನ್ಸಿಗಳನ್ನು ಮುದ್ರಿಸುತ್ತಿದೆ ಎಂದು ವರದಿ ಮಾಡಿದೆ.

ಅತಿ ದೊಡ್ಡ ಮಾದಕ ವಸ್ತು ಸಾಗಾಣೆ ಜಾಲವನ್ನು ದೆಹಲಿ ಪೊಲೀಸ್ ಪತ್ತೆ ಹಚ್ಚಿದೆ. ಅಲ್ಲದೆ 330 ಕೆ.ಜಿ ಹೆರೋಯಿನ್ ವಶಪಡಿಸಲಾಗಿದೆ ಎಂದು ತಿಳಿಸಿದೆ.

TRENDING