Saturday, April 17, 2021
Home ದೆಹಲಿ ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಭಾಗಿಯಾದ 200 ಮಂದಿಯ ಫೋಟೊ ಬಿಡುಗಡೆ

ಇದೀಗ ಬಂದ ಸುದ್ದಿ

ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಭಾಗಿಯಾದ 200 ಮಂದಿಯ ಫೋಟೊ ಬಿಡುಗಡೆ

 ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪೈಕಿ 200 ಮಂದಿಯ ಫೋಟೊಗಳನ್ನು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ವಿಡಿಯೋಗಳಿಂದ ಫೋಟೋಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಹಿಂಸಾಚಾರ ಎಸಗಿದವರ ಫೋಟೋಗಳನ್ನು ಬಹಿರಂಗಗೊಳಿಸಲಾಗಿದೆ ಅವರ ಗುರುತನ್ನು ಪತ್ತೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ 2020 ರ ನವೆಂಬರ್ ನಿಂದ ಪ್ರತಿಭಟನೆ ನಡೆಸುತ್ತಿದ್ದು, ಜನವರೀ ೨೬ ರಂದು ನಡೆದ ಟ್ರಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿತ್ತು.

TRENDING