Saturday, April 17, 2021
Home ಜಿಲ್ಲೆ ಮೈಸೂರು ಮೈಸೂರಿನಲ್ಲಿ ಮುಂದುವರಿದೆ ಕಾಡಾನೆ ದಾಳಿ

ಇದೀಗ ಬಂದ ಸುದ್ದಿ

ಮೈಸೂರಿನಲ್ಲಿ ಮುಂದುವರಿದೆ ಕಾಡಾನೆ ದಾಳಿ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾಲೇ ತಿಮ್ಮನಹಳ್ಳಿಯಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ. ರೈತ ಸೀತಮ್ಮ ಅವರ ಜಮೀನಿನ ಬೆಳೆ ನಾಶಮಾಡಿರುವ ಮಾಡಾನೆ ರೈತರು ಬೆಳೆದ

ಮೂರು ಎಕರೆ ಬಾಳೆ,  ಎರಡು ಎಕರೆ ಗೆಣಸು, 200 ತೆಂಗಿನ ಮರ , 200 ಅಡಿಕೆ ಮರ ನಾಶ ಮಾಡಿ, ಸುಮಾರು 15 ಲಕ್ಷ ನಷ್ಟ ಉಂಟುಮಾಡಿದೆ‌‌.

ಮುತ್ತೂರು ಅರಣ್ಯ ವಲಯದಿಂದ ಬರುವ ಆನೆಗಳು ಆ ಭಾಗದ ರೈತರ ಬೆಳೆಗಳನ್ನ ಹಾಳು ಮಾಡುತ್ತಿವೆ. ಆನೆಗಳ ತಡೆಗೆ ತಡೆಗೋಡೆ ನಿರ್ಮಿಸಿದ್ದರೂ ಅದು ಸಮರ್ಪಕವಾಗಿಲ್ಲ.ಅದನ್ನು ದುರಸ್ತಿ ಮಾಡುವಂತೆ ರೈತರು ಎಷ್ಟೇ ಮನವಿ ಮಾಡಿದರು ಅರಣ್ಯ ಇಲಾಖೆ ಸ್ಪಂದಿಸದ ಹಿನ್ನೆಲೆ ಘಟನೆಗೆ ಕಾರಣವಾಗಿದ್ದು, ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಅಂತಾ ಒತ್ತಾಯ ಮಾಡಿದ್ದಾರೆ‌.

TRENDING