Tuesday, April 13, 2021
Home ಸುದ್ದಿ ಜಾಲ ಏ. 1 ರಿಂದ ಕುಂಭಮೇಳ ಆರಂಭ : 30 ದಿನಗಳ ಕಾಲ ಮಾತ್ರ ಆಚರಣೆ

ಇದೀಗ ಬಂದ ಸುದ್ದಿ

ಏ. 1 ರಿಂದ ಕುಂಭಮೇಳ ಆರಂಭ : 30 ದಿನಗಳ ಕಾಲ ಮಾತ್ರ ಆಚರಣೆ

ಕೋವಿಡ್ ಸಾಂಕ್ರಾಮಿಕದ ನಡುವೆ ಉತ್ತರಾಖಂಡ ಸರ್ಕಾರವು ಕುಂಭ ಮೇಳ ಆಯೋಜಿಸುತ್ತಿದ್ದು, ಈ ಬಾರಿಯ ಕುಂಭ ಮೇಳ ಕೇವಲ 30 ದಿನ ನಡೆಯಲಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 30ರವರೆಗೆ 30 ದಿನಗಳ ಕಾಲ ಮಾತ್ರ ಕುಂಭ ಮೇಳ ನಡೆಯಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಈ ಸಂಬಂಧ ಸೂಚನೆ ಹೊರಡಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ತಿಳಿಸಿದ್ದಾರೆ.

ಕುಂಭ ಮೇಳ ಈ ಹಿಂದಿನಂತೆ ಸುದೀರ್ಘ ಸಮಯ ನಡೆದರೆ ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚಬಹುದು ಎಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳು ಪಾಸ್‌ಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ . ಇನ್ನು ಭಕ್ತರು ಕೊರೋನಾ ನೆಗೆಟಿವ್ ವರದಿ ನೀಡಿದರೆ ಮಾತ್ರ ಪಾಸ್ ನೀಡಲಾಗುವುದು ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ. ರವಿಶಂಕರ್ ತಿಳಿಸಿದ್ದಾರೆ.

TRENDING