ಭಾರತೀಯ ಷೇರುಪೇಟೆಯು ಗುರುವಾರ ಕೂಡ ಸತತ ಕುಸಿತ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 379 ಪಾಯಿಂಟ್ಸ್ ಇಳಿಕೆಗೊಂಡರೆ, ನಿಫ್ಟಿ 90 ಪಾಯಿಂಟ್ಸ್ ಕುಸಿದಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.73ರಷ್ಟು ಅಥವಾ 379.14 ಪಾಯಿಂಟ್ಸ್ ಕುಸಿದು 51,324.69 ಪಾಯಿಂಟ್ಸ್ ತಲುಪಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 0.59ರಷ್ಟು ಅಥವಾ 90 ಪಾಯಿಂಟ್ಸ್ ಇಳಿಕೆಗೊಂಡು 15,118.95 ಪಾಯಿಂಟ್ಸ್ ಗಡಿ ಮುಟ್ಟಿದೆ.
ಇಂದು 1609 ಷೇರುಗಳು ಏರಿಕೆಗೊಂಡರೆ, 1316 ಷೇರುಗಳು ಕುಸಿತ ಕಂಡಿವೆ ಮತ್ತು 151 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನಿಫ್ಟಿಯಲ್ಲಿ ಪ್ರಮುಖವಾಗಿ ಬಜಾಜ್ ಫೈನಾನ್ಸ್, ನೆಸ್ಲೆ, ಕೊಟಕ್ ಮಹೀಂದ್ರಾ ಬ್ಯಾಂಕ್, ಎಂ ಅಂಡ್ ಎಂ ಮತ್ತು ಶ್ರೀ ಸಿಮೆಂಟ್ಸ್ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಒಎನ್ಜಿಸಿ, ಗೇಲ್, ಬಿಪಿಸಿಎಲ್, ಐಒಸಿ ಮತ್ತು ಎನ್ಟಿಪಿಸಿ ಪ್ರಮುಖವಾಗಿ ಲಾಭ ಗಳಿಸಿದ ಷೇರುಗಳಾಗಿವೆ. ಪಿಎಸ್ಯು ಬ್ಯಾಂಕ್ 5 ಪ್ರತಿಶತ ಮತ್ತು ಐಟಿ, ಮೆಟಲ್ ಮತ್ತು ಎನರ್ಜಿ ಸೂಚ್ಯಂಕಗಳು ಶೇಕಡಾ 1 ರಿಂದ 2ರಷ್ಟು ಏರಿಕೆ ಕಂಡರೆ, ಆಟೋ ವಲಯದ ಷೇರು ಸೂಚ್ಯಂಕ ಶೇಕಡಾ 1ರಷ್ಟು ಕುಸಿದಿದೆ.