Saturday, April 17, 2021
Home ಸುದ್ದಿ ಜಾಲ ಡಾ.ರಾಜ್ ಕುಮಾರ್ ಪ್ರತಿಮೆ ವಿರುದ್ಧ ಅವಹೇಳನಕಾರಿ ಹೇಳಿಕೆ : ಶಾಸಕ ಹ್ಯಾರೀಸ್ ಮನೆ ಮುಂದೆ ರಾಜ್...

ಇದೀಗ ಬಂದ ಸುದ್ದಿ

ಡಾ.ರಾಜ್ ಕುಮಾರ್ ಪ್ರತಿಮೆ ವಿರುದ್ಧ ಅವಹೇಳನಕಾರಿ ಹೇಳಿಕೆ : ಶಾಸಕ ಹ್ಯಾರೀಸ್ ಮನೆ ಮುಂದೆ ರಾಜ್ ಅಭಿಮಾನಿಗಳಿಂದ ಪ್ರತಿಭಟನೆ

ಬೆಂಗಳೂರು : ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದಂತ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಮನೆಯ ಮುಂದೆ ಡಾ.ರಾಜ್ ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂಲಕ ರಾಜ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಂತ ಶಾಸಕ ಹ್ಯಾರೀಸ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವರನಟ ಡಾ.ರಾಜ್​ಕುಮಾರ್​ ಅವರ ಪ್ರತಿಮೆ ವಿಚಾರದಲ್ಲಿ ಮಾತನಾಡಿದ್ದ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರು, ರಾಜ್​​ಕುಮಾರ್​ ಪ್ರತಿಮೆ ನೋಡಲು ಹೋಗಿದ್ದರು. ಈ ವೇಳೆ ಮಾತನಾಡಿದ್ದ ಹ್ಯಾರಿಸ್, ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ. ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ? ಈ ಪ್ರತಿಮೆಗೆ ಕವರ್​ ಏನು ಬೇಕಾಗುವುದಿಲ್ಲ. ಓಪನ್ ಆಗಿ ಇಡಿ ಎಂದಿದ್ದರು.

ಮುಂದುವರೆದು ಮಾತನಾಡಿದ್ದ ಅವರು, ಸ್ಟ್ಯಾಚ್ಯುಗೆಲ್ಲಾ ಕವರ್ ಯಾಕ್ ಬೇಕು? ಪ್ರೊಟೆಕ್ಷನ್ ಬೇಕಿದ್ದರೆ ಮನೆಯಲ್ಲೇ ಇಟ್ಟಿದ್ದರೆ ಆಗಿರುತ್ತಿತ್ತು. ರೋಡಲ್ಲಿ ಯಾಕೆ ಇಡುತ್ತಾರೆ? ಬುದ್ಧಿ ಇಲ್ಲ, ಏನ್ ಮಾಡೋದು? ಏನಾದರೂ ಹೇಳಿದರೆ ಅದನ್ನು ಬೇರೆ ರೀತಿಯಲ್ಲೇ ತೆಗೆದುಕೊಳ್ಳುತ್ತಾರೆ ಎಂದಿದ್ದರು.

ಇಂತಹ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ, ರಾಜ್ಯಾಧ್ಯಂತ ವ್ಯಾಪಕ ಆಕ್ರೋಶ ಶಾಸಕ ಹ್ಯಾರೀಸ್ ಹೇಳಿಕೆ ವಿರುದ್ಧ ವ್ಯಕ್ತವಾಗಿತ್ತು. ಈ ಬಳಿಕ ಶಾಸಕ ಹ್ಯಾರೀಸ್ ಯೂಟರ್ನ್​ ತೆಗೆದುಕೊಂಡಿದ್ದರು. ನಾನು ಹಾಗೆ ಮಾತನಾಡೇ ಇಲ್ಲ. ಯಾರೋ ವಿಡಿಯೋವನ್ನು ಎಡಿಟ್​ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೂಡ ಕೇಳಿದ್ದರು.

ಈ ಬಳಿಕವೂ ಶಾಂತಿನಗರದ ಅವರ ನಿವಾಸದ ಮುಂದೆ ಹ್ಯಾರೀಸ್ ಹೇಳಿಕೆ ಖಂಡಿಸಿ, ರಾಜ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

TRENDING