Saturday, April 17, 2021
Home ಸುದ್ದಿ ಜಾಲ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ತಪ್ಪು ಕಲ್ಪನೆ, ಬೆಳೆಗಾರರು ಆಂತಕ ಪಡಬೇಡಿ - ಸಿಎಂ ಯಡಿಯೂರಪ್ಪ

ಇದೀಗ ಬಂದ ಸುದ್ದಿ

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ತಪ್ಪು ಕಲ್ಪನೆ, ಬೆಳೆಗಾರರು ಆಂತಕ ಪಡಬೇಡಿ – ಸಿಎಂ ಯಡಿಯೂರಪ್ಪ

ಶಿವಮೊಗ್ಗ : ಅಡಿಕೆ ಆರೋಗ್ಯಕ್ಕೆ ಹಾನಿಕಾರ ಎಂಬುದು ತಪ್ಪು ಕಲ್ಪನೆ. ಇದರಿಂದಾಗಿ ಯಾವುದೇ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಇಂತಹ ತಪ್ಪು ಕಲ್ಪನೆಯನ್ನು ಹೋಗಲಾಡಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳುವ ಮೂಲಕ, ಆತಂಕದಲ್ಲಿರುವಂತ ಅಡಿಕೆ ಬೆಳೆಗಾರರಿಗೆ ಅಭಯ ನೀಡಿದ್ದಾರೆ.

ಈ ಕುರಿತಂತೆ ರಾಜ್ಯ ಅಡಿಕೆ ಕಾರ್ಯಪಡೆ ಅಧ್ಯಕ್ಷ ಶಾಸಕ ಅರಗ ಜ್ಞಾನೇಂದ್ರ ಅವರು ಮಾತನಾಡಿ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದಾಗಿ ಈಗಾಗಲೇ ಸಂಶೋಧನಾ ವರದಿ ಬರೋವರೆಗೆ ಪ್ರಕರಣ ಇತ್ಯರ್ಥ ಮಾಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಅಡಿಕೆ ಬೆಳೆಗಾರರಿಗೆ ನಾನು ಭರವಸೆ ನೀಡುತ್ತೇನೆ, ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬುದು ತಪ್ಪ ಕಲ್ಪನೆ. ಅಡಿಕೆ ಬೆಳೆಗಾರರು ಇದರಿಂದಾಗಿ ಯಾವುದೇ ಆತಂಕ ಪಡಬಾರದು ಎಂಬುದಾಗಿ ಹೇಳಿದ್ದಾರೆ.

TRENDING