Tuesday, April 13, 2021
Home ಸುದ್ದಿ ಜಾಲ ಹುಣಸೂರು: ಹೊಟ್ಟೆ ಉಬ್ಬರಿಸಿಕೊಂಡು ವಿಚಿತ್ರವಾಗಿ 16 ಕುರಿಗಳು ಸಾವು!

ಇದೀಗ ಬಂದ ಸುದ್ದಿ

ಹುಣಸೂರು: ಹೊಟ್ಟೆ ಉಬ್ಬರಿಸಿಕೊಂಡು ವಿಚಿತ್ರವಾಗಿ 16 ಕುರಿಗಳು ಸಾವು!

 ಹುಣಸೂರು: ಹೊಟ್ಟೆ ಉಬ್ಬರಿಸಿಕೊಂಡು 16 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯಲ್ಲಿ ನಡೆದಿದೆ.

ದೇವಗಳ್ಳಿಯ ಅನಿಲ್ ಗೌಡರಿಗೆ ಸೇರಿದ ಕುರಿಗಳು ಇವಾಗಿದ್ದು, ಅನಿಲ್ ಗೌಡ ಹಸುಗಳೊಂದಿಗೆ ಕುರಿ ಸಾಕಣೆ ಮಾಡುತ್ತಿದ್ದಾರೆ. ಇವರಿಗೆ ಸೇರಿದ 7 ಹಸುಗಳು ಸೋಮವಾರ ವಿಚಿತ್ರ ಕಾಯಿಲೆಯಿಂದ ಒದ್ದಾಡಿ ಪ್ರಾಣ ಬಿಟ್ಡಿದ್ದವು.

ಬುಧವಾರ ಕುರಿಗಳಿಗೆ ಹೊಟ್ಟೆ ಉಬ್ಬರಿಸಿಕೊಂಡು ಒದ್ದಾಡುತ್ತಿದ್ದವು. ಬಿಳಿಕೆರೆ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಪ್ರಾಣಬಿಟ್ಟಿವೆ.

ವಿಷಯ ತಿಳಿದ ಪಶು ವೈದ್ಯಕೀಯ ಇಲಾಖೆಯ ವಿಜ್ಣಾನಿ ಡಾ.ಸುಮಂತ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ದೊಡ್ಡಮನಿ ಹೊಸಮಠ್ ತಿಳಿಸಿದ್ದಾರೆ

TRENDING