Saturday, April 17, 2021
Home ಸುದ್ದಿ ಜಾಲ ಮೊಬೈಲ್ ಗ್ರಾಹಕರಿಗೆ ಬಿಗ್ ಶಾಕ್: ದುಬಾರಿಯಾಗಲಿದೆ ಇಂಟರ್ನೆಟ್, ಕರೆ ದರ

ಇದೀಗ ಬಂದ ಸುದ್ದಿ

ಮೊಬೈಲ್ ಗ್ರಾಹಕರಿಗೆ ಬಿಗ್ ಶಾಕ್: ದುಬಾರಿಯಾಗಲಿದೆ ಇಂಟರ್ನೆಟ್, ಕರೆ ದರ

 ನವದೆಹಲಿ: ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಟೆಲಿಕಾಂ ಕಂಪನಿಗಳು ಏಪ್ರಿಲ್ 1 ರಿಂದ ಮೊಬೈಲ್ ಇಂಟರ್ನೆಟ್, ಕರೆ ದರ ಹೆಚ್ಚಿಸುವ ಸಾಧ್ಯತೆ ಇದೆ.

ಕೆಲವು ಟೆಲಿಕಾಂ ಕಂಪನಿಗಳು ಏಪ್ರಿಲ್ 1 ರಿಂದ ದರ ಹೆಚ್ಚಳಕ್ಕೆ ತಯಾರಿ ನಡೆಸುತ್ತಿವೆ. ಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಮೊಬೈಲ್ ಕಂಪನಿಗಳು ದರ ಹೆಚ್ಚಳ ಮಾಡಲಿವೆ. 2021 – 22 ರ ಏಪ್ರಿಲ್ 1 ರಿಂದ ಇಂಟರ್ನೆಟ್ ದುಬಾರಿಯಾಗಲಿದೆ ಎಂದು ಹೇಳಲಾಗಿದೆ.

ಆದರೆ ಎಷ್ಟು ಹೆಚ್ಚಳ ಮಾಡಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. 4 ಜಿ ಗ್ರಾಹಕ ಬಳಕೆದಾರರ ಶುಲ್ಕ ಹೆಚ್ಚಾಗಲಿದೆ. ಕೊರೋನಾ ಲಾಕ್ ಡೌನ್ ಪರಿಣಾಮ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಲಾಕ್ ಡೌನ್ ಅವಧಿಯಲ್ಲಿ ಮೊಬೈಲ್ ಡೇಟಾ ಬಳಕೆ ಹೆಚ್ಚಾಗಿದ್ದರಿಂದ ಪರಿಸ್ಥಿತಿ ಸುಧಾರಿಸಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ, ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಿದ ಕಾರಣ ಡೇಟಾ ಬಳಕೆ ಹೆಚ್ಚಾಗಿದೆ. ಇದಾದ ನಂತರದಲ್ಲಿ ಟೆಲಿಕಾಂ ಕಂಪನಿಗಳು ಒಟ್ಟು ಹೊಂದಾಣಿಕೆ ಮೊತ್ತ ಪಾವತಿಸಬೇಕಾದ ಕಾರಣ ಗ್ರಾಹಕರಿಗೆ ಶುಲ್ಕ ಹೊರೆ ವರ್ಗಾವಯಿಸಲು ಸಜ್ಜಾಗಿವೆ ಎನ್ನಲಾಗಿದೆ.

TRENDING