Saturday, April 17, 2021
Home ಸುದ್ದಿ ಜಾಲ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಫೆ.26ಕ್ಕೆ ಕಾಂಗ್ರೆಸ್ ಸೇರ್ಪಡೆ

ಇದೀಗ ಬಂದ ಸುದ್ದಿ

ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಫೆ.26ಕ್ಕೆ ಕಾಂಗ್ರೆಸ್ ಸೇರ್ಪಡೆ

 ಚಿಕ್ಕಬಳ್ಳಾಪುರ : ಬಿಜೆಪಿ ಸಂಸದ ಬಚ್ಚೆಗೌಡರ ಮಗ ಹಾಗೂ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಫೆ.26ಕ್ಕೆ ಕಾಂಗ್ರೆಸ್ ಸೇರ್ಪಡೆ ಆಗುವುದು ಬಹುತೇಕ ನಿಕ್ಕಿಯಾಗಿದೆ.

ಹೊಸ ಕೋಟೆಗೆ ನಡೆದ ಉಪಚುನಾವಣೆಯಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್‌ ವಿರುದ್ದ ಗೆದ್ದು ಬೀಗಿದ್ದರು ಶರತ್ ಬಚ್ಚೇಗೌಡ, ಆದಾದ ಬಳಿಕ ಅವರನ್ನು ಬಿಜೆಪಿಗೆ ಬರುವಂತೆ ಖುದ್ದು ಬಿಎಸ್‌ವೈ ಮನವಿ ಮಾಡಿಕೊಂಡಿದ್ದರು ಕೂಡ ರಾಜಕೀಯ ಭವಿಷ್ಯದ ಸಲುವಾಗಿ ಜೊತೆಗೆ ಹೊಸಕೋಟೆಯಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್‌ ಅವರಿಗೆ ಸರಿ ಸಮನಾಗಿ ಬೆಳೆಯುವ ನಿಟ್ಟಿನಲ್ಲಿ ಶರತ್ ಬಚ್ಚೇಗೌಡ ಬಿಜೆಪಿಗೆ ಸೇರದೆ ಇರಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹಲವು ಸುತ್ತಿನ ಚರ್ಚೆಯ ಬಳಿಕ ಕೊನೆಗೂ ಶರತ್ ಬಚ್ಚೇಗೌಡ ಕಾಂಗ್ರೆ ಸ್ ಸೇರ್ಪಡೆಯಾಗುವ ದಿನಾಂಕ ಫಿಕ್ಸ್ ಆಗಿದ್ದು, ಇದೇ ಫೆ.26 ಕ್ಕೆ ಕಾಂಗ್ರೆಸ್ ಪಕ್ಷವನ್ನು ಶಾಸಕ ಶರತ್ ಬಚ್ಚೇಗೌಡ ಸೇರಲಿದ್ದಾರೆ ಅಂಥ ತಿಳಿದು ಬಂದಿದೆ.

TRENDING