Saturday, April 17, 2021
Home ಸುದ್ದಿ ಜಾಲ ಭಾರತದಲ್ಲಿ ಎಲೆಕ್ಟ್ರಿಕ್‌ ಬೈಸಿಕಲ್ ಬಿಡುಗಡೆ..!

ಇದೀಗ ಬಂದ ಸುದ್ದಿ

ಭಾರತದಲ್ಲಿ ಎಲೆಕ್ಟ್ರಿಕ್‌ ಬೈಸಿಕಲ್ ಬಿಡುಗಡೆ..!

 3-ಸ್ಪೀಡ್ ಎಲೆಕ್ಟ್ರಿಕ್ ಬೈಸಿಕಲ್‌ ಲಾಂಚ್‌ ಮಾಡಿರುವ ನೆಕ್ಸ್‌ಜು ಮೊಬಿಲಿಟಿ ಇದನ್ನು ಈಗ ಬಿಡುಗಡೆ ಮಾಡಿದೆ. ಈ ರಾಂಪಸ್‌+ ಹೆಸರಿನ ಬೈಸಿಕಲ್‌ 36 ವ್ಯಾಟ್‌ ಬ್ಯಾಟರಿಯಲ್ಲಿ ಚಲಿಸಲಿದೆ.

5.2 ಎಎಚ್‌ ಲಿಥಿಯಮ್-ಐಯಾನ್ ಬ್ಯಾಟರಿ ಮೇಲೆ ಈ ಬೈಸಿಕಲ್ ಚಲಿಸಲಿದ್ದು, 750 ಬಾರಿ ಈ ಬ್ಯಾಟರಿ ಮರುಚಾರ್ಜ್ ಮಾಡಬಹುದಾಗಿದೆ. 2.5-3 ಗಂಟೆಗಳ ಅವಧಿಯಲ್ಲಿ ಬ್ಯಾಟರಿ ಪೂರ್ತಿ ಚಾರ್ಜ್ ಆಗಲಿದೆ. 25ಕಿಮೀಗಳ ಚಾಲನಾ ರೇಂಜ್ ಹೊಂದಿರುವ ಈ ಬೈಸಿಕಲ್ ಇಕೋ ಪೆಡೆಲೆಕ್ ಮೋಡ್‌ನಲ್ಲಿ 35ಕಿಮೀಗಳಷ್ಟು ದೂರ ಚಲಿಸಲಿದೆ. 250 ವ್ಯಾಟ್‌ ಹಬ್‌ ಬಿಎಲ್‌ಡಿಸಿ ಮೋಟರ್‌ ಮೇಲೆ ಬೈಸಿಕಲ್‌ ಚಲಿಸಲಿದೆ.

26 ಇಂಚಿನ ಟೈರ್‌ಗಳ ಮೇಲೆ ಓಡಲಿರುವ ಈ ಬೈಸಿಕಲ್‌ಗೆ ಡ್ಯುಯಲ್ ಡಿಸ್ಕ್‌ ಬ್ರೇಕ್‌ಗಳು ಇವೆ. ಮೋಟರ್‌ ಹಾಗೂ ಬ್ಯಾಟರಿ ಮೇಲೆ 18 ತಿಂಗಳ ವಾರಂಟಿ ಇದೆ.

ರೋಂಪಸ್+ ಬೈಸಿಕಲ್‌ನ ಬೆಲೆಯು 31,983 ರೂ.ಗಳಷ್ಟಿದೆ.

TRENDING