Tuesday, April 13, 2021
Home ಸುದ್ದಿ ಜಾಲ ಮದುವೆ ಸಂಭ್ರಮದ ಹಳೆ ಫೋಟೋ ಹಂಚಿಕೊಂಡ ಪ್ರಿಯಾಂಕಾ ವಾದ್ರಾ

ಇದೀಗ ಬಂದ ಸುದ್ದಿ

ಮದುವೆ ಸಂಭ್ರಮದ ಹಳೆ ಫೋಟೋ ಹಂಚಿಕೊಂಡ ಪ್ರಿಯಾಂಕಾ ವಾದ್ರಾ

ಸಾಮಾಜಿಕ ಜಾಲತಾಣಗಳಲ್ಲಿ ಈ ಥ್ರೋಬ್ಯಾಕ್ ಚಿತ್ರಗಳ ಹವಾ ಸಖತ್ತಾಗೇ ಇದೆ. ತಂತಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ ನೆಟ್ಟಿಗರು.

ಕಾಂಗ್ರೆಸ್ ಕಾಯದರ್ಶಿ ಪ್ರಿಯಾಂಕಾ ವಾದ್ರಾ 24 ವರ್ಷಗಳ ಹಿಂದಿನ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಮದುವೆಯ ಹಿಂದಿನ ದಿನಗಳ ತಯಾರಿಯ ಕ್ಷಣಗಳ ಸಂಭ್ರಮವನ್ನು ಪ್ರಿಯಾಂಕಾ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ.

ಫೆಬ್ರವರಿ 18, 1997ರಂದು ನಡೆದ ತಮ್ಮ ವಿವಾಹದ ಸಂದರ್ಭದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪ್ರಿಯಾಂಕಾ, “24 ವರ್ಷಗಳ ಹಿಂದೆ ನನ್ನ ಹೂ ಮುಡಿಸುವ ಶಾಸ್ತ್ರದ ಸಮಾರಂಭದ ವೇಳೆ ನನ್ನ ವಾರಗಿತ್ತಿ ಜೊತೆಗೆ. ಅವರು ಈಗ ನಮ್ಮೊಂದಿಗೆ ಇಲ್ಲ” ಎಂದು ಪೋಸ್ಟ್‌ ಮಾಡಿದ್ದಾರೆ.

ಮದುವೆಗೆ ಎರಡು ದಿನಗಳ ಮುನ್ನ ಈ ಶಾಸ್ತ್ರವನ್ನು ಕಾಶ್ಮೀರಿಗಳ ಸಂಪ್ರದಾಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ.

TRENDING