ಟೆಹ್ರಾನ್: ಮಧ್ಯ ಇರಾನ್ನ ಸಿಸಖ್ತ್ ನಗರದಲ್ಲಿ ಬುಧವಾರ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ರಾಜಧಾನಿ ಟೆಹ್ರಾನ್ನಿಂದ ದಕ್ಷಿಣ ಭಾಗದಲ್ಲಿ 500 ಕಿ.ಮೀ ದೂರದಲ್ಲಿರುವ ಸಿಸಖ್ತ್ ಪಟ್ಟಣ, ಭೂಕಂಪದಿಂದ ನಲುಗಿ ಹೋಗಿದೆ ಎಂದು ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.
ಸಿಸಖ್ತ್ ಪಟ್ಟಣದ ಕೃಷಿ ಪ್ರದೇಶವಾಗಿದ್ದು, ಸುಮಾರು 6ಸಾವಿರ ಜನಸಂಖ್ಯೆ ಹೊಂದಿದೆ. ಇದು ಕೊಹ್ಕಿಲುಯೆಹ್ ಮತ್ತು ಬೊಯೆರ್-ಅಹ್ಮದ್ ಪ್ರಾಂತ್ಯದ ಭಾಗವಾಗಿದೆ.