Saturday, April 17, 2021
Home ಸುದ್ದಿ ಜಾಲ ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆ

ಇದೀಗ ಬಂದ ಸುದ್ದಿ

ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆ

 ಬೆಂಗಳೂರು: ನಗರದ ಬೊಮ್ಮನಹಳ್ಳಿ ವಲಯದ ಬಿಳೇಕಹಳ್ಳಿ ಸಮೀಪದ ಎಸ್‌ಎನ್‌ಎನ್ ರಾಜ್ ಲೇಕ್ ವೀವ್ ಅಪಾರ್ಟ್ಮೆಂಟ್​ನಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ನಿನ್ನೆ ಬುಧವಾರ ಇನ್ನೂ ಆರು ಮಂದಿಯಲ್ಲಿ ಹೊಸ ಸೋಂಕು ಪತ್ತೆಯಾಗಿದ್ದು, ಒಟ್ಟು ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ 109 ಕ್ಕೆ ಏರಿಕೆ ಕಂಡಿದೆ. ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವುದು ಬೆಂಗಳೂರು ನಗರ ವಾಸಿಸಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಪಾರ್ಟ್​ಮೆಂಟ್​ನಲ್ಲಿ ಫೇಸ್ 1 ಮತ್ತು ಫೇಸ್ 2 ನಲ್ಲಿನ 50 ಟವರ್​ಗಳಲ್ಲಿ ಪುಲ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ 6 ಜನ ವೈದ್ಯರ ತಂಡ 3 ದಿನಗಳಿಂದ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದ್ದು, ಅಪಾರ್ಟ್ಮೆಂಟ್ ಫೇಸ್ 1 ಮತ್ತು 2 ನಲ್ಲಿರುವ ಎಲ್ಲಾ ನಿವಾಸಿಗಳಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಅಪಾರ್ಟ್ಮೆಂಟ್​ನ ಎಲ್ಲಾ ವಾಸಿಗಳಿಗು ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಒಟ್ಟು 109 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಂಧ್ರದಲ್ಲಿ ಮದ್ಯ ಬ್ಯಾನ್​ ಪರಿಣಾಮ ಸಂಕಷ್ಟಕ್ಕೆ ಒಳಗಾದ ಗಡಿಯಂಚಿನ ಗ್ರಾಮಗಳು; ಹಳ್ಳಿಗಳಲ್ಲೂ ತಲೆ ಎತ್ತುತ್ತಿವೆ ಬಾರ್​

ಇನ್ನು, ಫೆ 6 ರಂದು ಡೆಹ್ರಾಡೂನ್ ಸೇರಿದಂತೆ ಬೇರೆಬೇರೆ ಕಡೆಯಿಂದ ಆಗಮಿಸಿದ್ದ ನೂರಾರು ಮಂದಿ ಅಪಾರ್ಟ್ಮೆಂಟ್​ನ ಪಾರ್ಟಿ ಹಾಲ್​ನಲ್ಲಿ ಮೂರು ದಿನಗಳ ಕಾಲ ಭರ್ಜರಿ ಪಾರ್ಟಿ ನಡೆಸಿದ್ದರು. ವಾರದ ಬಳಿಕ ಕೆಲವರಲ್ಲಿ ನೆಗಡಿ, ಜ್ವರ ತಲೆನೋವು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಕೊರೋನಾ ಟೆಸ್ಟ್ ನಡೆಸಿದಾಗ ಪ್ರಾರಂಭದಲ್ಲಿ 30 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಆಗಿತ್ತು. ಕಳೆದ ಎರಡು ದಿನಗಳಲ್ಲಿ ಸೆಂಚುರಿ ಬಾರಿಸಿರುವ ಕೊರೊನಾ ಸೋಂಕಿತರ ಸಂಖ್ಯೆ ಇಂದು 109 ಕ್ಕೆ ತಲುಪಿದೆ. ಮೊನ್ನೆ 103 ಇದ್ದ ಕೊರೊನಾ ಪೀಡಿತರ ಸಂಖ್ಯೆ ನಿನ್ನೆ ಮತ್ತೆ 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಒಟ್ಟು ಸಂಖ್ಯೆ 109 ತಲುಪಿದೆ.

ಕೊರೊನಾ ಹಾಟ್ ಸ್ಪಾಟ್ ಎಸ್‌ಎನ್‌ಎನ್ ರಾಜ್ ಅಪಾರ್ಟ್ಮೆಂಟ್​ನಲ್ಲಿ ಸೋಂಕು ತಡೆಗಟ್ಟಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸೆಕ್ಯೂರಿಟಿ, ಹೌಸ್ ಕೀಪಿಂಗ್ , ಗಾರ್ಡನ್ ಹಾಗೂ ಡ್ರೈವರ್​ಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಹಾಲು, ಪೇಪರ್, ತರಕಾರಿ ಕೊಡಲು ಸಮಯ ನಿಗದಿ ಮಾಡಲಾಗಿದೆ. ಹಾಲು ಪೇಪರ್ ಕೊಡುವರು ಪಿಪಿಇ ಕಿಟ್ ಧರಿಸಿ ಒಳ ಹೋಗಲು ಅವಕಾಶ ನೀಡಿದ್ದು, ಕೊರೋನಾ ಟೆಸ್ಟ್ ಸರ್ಟಿಫಿಕೇಟ್ ಹೊಂದಿರಬೇಕು ಎನ್ನಲಾಗಿದೆ.

 ಒಟ್ಟಿಲ್ಲಿ ಫೆಬ್ರವರಿ 6, 7, 8 ರಂದು ನಡೆದಿದ್ಧ‌ ಮೋಜು ಮಸ್ತಿ ಪಾರ್ಟಿಯಿಂದ ಇಡೀ ಅಪಾರ್ಟ್ಮೆಂಟ್ ಸದ್ಯ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಘಟನೆಯಿಂದ ಎಚ್ಚೆತ್ತಿರುವ ಬಿಬಿಎಂಪಿ ಅಧಿಕಾರಿಗಳು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

TRENDING