Tuesday, April 13, 2021
Home ಸುದ್ದಿ ಜಾಲ ಶಾಸಕ ಯತ್ನಾಳ್ ಮೇಲೆ ಯಾವ ಆಸಕ್ತಿಯೂ ಇಲ್ಲ:ಅರುಣ್ ಸಿಂಗ್

ಇದೀಗ ಬಂದ ಸುದ್ದಿ

ಶಾಸಕ ಯತ್ನಾಳ್ ಮೇಲೆ ಯಾವ ಆಸಕ್ತಿಯೂ ಇಲ್ಲ:ಅರುಣ್ ಸಿಂಗ್

ಹಾಸನ: ನನಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೇಲೆ ಯಾವ ಆಸಕ್ತಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಹಾಸನದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನನಗೆ ಗಮನವಿದೆ. ಯತ್ನಾಳ್ ಬಗ್ಗೆ ಯಾವ ಆಸಕ್ತಿಯೂ ಇಲ್ಲ, ನಿಮ್ಮ ಬಗ್ಗೆಯೂ ನನಗೆ ಆಸಕ್ತಿಯಿಲ್ಲ‌. ನಿಮಗೆ ಯತ್ನಾಳ್ ಮೇಲೆ ಯಾಕೆ ಗಮನ‌ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.‌

ನಿಗಮ ಮಂಡಳಿ ಹಂಚಿಕೆ ವಿಚಾರದ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ. ಇವರ ಹಿಂದೆ ಕಾಂಗ್ರೆಸ್ ಇದೆ ಎಂದು ಅರುಣ್ ಸಿಂಗ್ ದೂರಿದರು.

TRENDING