Tuesday, April 13, 2021
Home ಕೋವಿಡ್-19 ಕೊರೊನಾ ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

ಇದೀಗ ಬಂದ ಸುದ್ದಿ

ಕೊರೊನಾ ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

 ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ಫ್ರಾನ್‌ ಗೋಲ್ಡ್‌ಮನ್ ಹೆಸರಿನ ಈ ಮಹಿಳೆ ಆರು ಮೈಲಿಯಷ್ಟು ದೂರ ನಡೆದು ಲಸಿಕೆ ಹಾಕಿಸಿಕೊಂಡಿದ್ದಾರೆ. ಶುಕ್ರವಾರ ಹಾಗೂ ಶನಿವಾರ ಭಾರೀ ಶೀತಗಾಳಿಯ ಪರಿಣಾಮ ನಗರದ ಬೀದಿಗಳೆಲ್ಲಾ ಹಿಮಾವೃತಗೊಂಡಿದ್ದವು. ಇವೆಲ್ಲದರ ನಡುವೆಯೇ ಲಸಿಕೆ ಹಾಕಿಸಿಕೊಳ್ಳಲು ಭಾನುವಾರ ಅಪಾಯಿಂಟ್‌ಮೆಂಟ್ ಪಡೆದಿದ್ದ ಗೋಲ್ಡ್‌ಮನ್, ಕೊನೆಗೂ ಇಂಜೆಕ್ಷನ್ ಪಡೆದುಕೊಂಡಿದ್ದಾರೆ.

ಬೆಚ್ಚನೆಯ ಉಡುಪುಗಳನ್ನು ಧರಿಸಿದ ಗೋಲ್ಡ್‌ಮನ್, ಹಿಮಾವೃತ ಬೀದಿಗಳ ನಡುವೆಯೇ ಆರು ಮೈಲು ದೂರ ನಡೆದುಕೊಂಡು ಹೋಗಿ, ಅಪಾಯಿಂಟ್‌ಮೆಂಟ್ ಸಮಯಕ್ಕಿಂತ ಕೇವಲ 5 ನಿಮಿಷ ತಡವಾಗಿ ಜಾಗ ತಲುಪಿ ಲಸಿಕೆ ಹಾಕಿಸಿಕೊಂಡಿದ್ದಾರೆ.

TRENDING