ಶಿರಾ:-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಕೇಂದ್ರ ಕಚೇರಿ ಧರ್ಮಸ್ಥಳ 2021 22 ನೇ ಸಾಲಿನ ಸಂಪೂರ್ಣ ಸುರಕ್ಷ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿಸ್ತರಿಸಲು ಪೂಜ್ಯರು ಅನುಮತಿ ನೀಡಿರುತ್ತಾರೆ.ಎಂದು ಶಿರಾ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಉಮಾರವರು ತಿಳಿಸಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಸ್ವ ಸಹಾಯ ಸಂಘದ ಸದಸ್ಯರಿಗೆ ಸೌಲಭ್ಯ ಸಂಘದ ಸದಸ್ಯರಿಗೆ ಮಾತ್ರ ವಾಗಿರುತ್ತದೆ ಆರೋಗ್ಯ ರಕ್ಷಾ ವಿಮೆ ಪಾಲಿಸಿ ಮಾಡಿಸುವ ಬಗ್ಗೆ ವಿವರಿಸಿ ವಿಮಾ ಇಂದಾ ಆಗುವ ಸೌಲಭ್ಯ ಗಳು ಬಗ್ಗೆ ವಿವರಿಸಿ.
ವಿಮಾ ಅವಧಿ1/4/21ರಿಂದ 31/3/22ರ 1ವರ್ಷ ಅವಧಿಗೆ ಸೀಮಿತವಾಗಿರುತ್ತೆದೆ. ಅರೋಗ್ಯ ರಕ್ಷ ಯೋಜನೆಗೆ ನೊಂದಾಯಿಸುವ ಸಂಘದ ಸದಸ್ಯರು ಪ್ರತಿಯೊಬ್ಬರು 245 ಶುಲ್ಕ ಪಾವತಿಸುವುದು.ಇದರಲ್ಲಿ ಸಂಘದ ಸದಸ್ಯರಿಗೆ ಅವರ ಸಂಘದಿಂದ ರೂ 125 ಅನುದಾನ ದೊರಕುವುದು. ಯೋಜನೆಯಿಂದ 20 ಅನುದಾನ ದೊರೆಯುತ್ತದೆ. ಹೀಗೆ ಸಂಘದ ಸದಸ್ಯರು ವಿಮಾ ಶುಲ್ಕ 100ಪಾವತಿಸಬೇಕು. 10000ರೂ ಮೊತ್ತದ ಸೌಲಭ್ಯ ದೊರೆಯುತ್ತದೆ.
ಆರೋಗ್ಯರಕ್ಷಾ ಪಾಲಿಸಿ ಮಾಡುವವರಾದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಾಗಿದ್ದಾರೆ ಮಾತ್ರವನ್ನು ಸೌಲಭ್ಯ ನೀಡಲಾಗುವುದು. ಕನಿಷ್ಠ 24 ಗಂಟೆ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದಾದ ಕಾಯಿಲೆಗೆ ಮಾತ್ರ ಅನ್ವಯ ಆಗುತ್ತದೆ. ಹಾಗೂ
ಸೌಂದರ್ಯವರ್ಧಕ ಚಿಕಿತ್ಸೆಗಳಿಗೆ ಸೌಲಭ್ಯಗಳು ದೊರೆಯುವುದಿಲ್ಲ ಇಂದು ಎಂದು ವಿವರಿಸಿದರು. ಕಾರ್ಯಕ್ರಮ ದಲ್ಲಿ ಸಮನ್ವಯಾಧಿಕಾರಿ ಶ್ರೀನಿವಾಸ ವಲಯದ ಮೇಲ್ವಿಚಾರಕರಾದ ಗೋಪಾಲಕೃಷ್ಣ. ಮತ್ತಿತರ ಉಪಸ್ಥಿತರಿದ್ದರು
ಶ್ರೀಮಂತ್ ಶಿರಾ
ವಿ ನ್ಯೂಸ್24 ಕನ್ನಡ