Saturday, April 17, 2021
Home ದೇಶ ಒಡಿಶಾದಲ್ಲಿ ತಲೆಯೆತ್ತಲಿದೆ ಭಾರತದ ಅತೀ ದೊಡ್ಡ ಹಾಕಿ ಸ್ಟೇಡಿಯಂ

ಇದೀಗ ಬಂದ ಸುದ್ದಿ

ಒಡಿಶಾದಲ್ಲಿ ತಲೆಯೆತ್ತಲಿದೆ ಭಾರತದ ಅತೀ ದೊಡ್ಡ ಹಾಕಿ ಸ್ಟೇಡಿಯಂ

 ರೂರ್ಕೆಲಾ : ಒಡಿಶಾದ ರೂರ್ಕೆಲಾದಲ್ಲಿ ಭಾರತದಲ್ಲೇ ಅತೀ ದೊಡ್ಡದಾದ ಹಾಕಿ ಕ್ರೀಡಾಂಗಣ ವೊಂದು ತಲೆಯೆತ್ತಲಿದೆ. ಇದಕ್ಕೆ ಮಂಗಳವಾರ ರಾಜ್ಯದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಶಿಲಾನ್ಯಾಸ ನೆರವೇರಿಸಿದರು.

“20 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂಗೆ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗುವುದು.

ಇಲ್ಲಿ 2023ರ ಹಾಕಿ ವಿಶ್ವಕಪ್‌ ಕೂಟದ ಪಂದ್ಯಗಳನ್ನು ಆಯೋಜಿಸುವುದು ನಮ್ಮ ಯೋಜನೆ’ ಎಂಬುದಾಗಿ ಪಟ್ನಾಯಕ್‌ ತಿಳಿಸಿದರು.

TRENDING