Saturday, April 17, 2021
Home ಅಂತರ್ ರಾಜ್ಯ ತಾಕತ್ತಿದ್ದರೆ ರಾಹುಲ್ ಗಾಂಧಿ ಗುಜರಾತ್ನಿಂದ ಸ್ಪರ್ಧಿಸಲಿ : ಸ್ಮೃತಿ ಇರಾನಿ ಸವಾಲು

ಇದೀಗ ಬಂದ ಸುದ್ದಿ

ತಾಕತ್ತಿದ್ದರೆ ರಾಹುಲ್ ಗಾಂಧಿ ಗುಜರಾತ್ನಿಂದ ಸ್ಪರ್ಧಿಸಲಿ : ಸ್ಮೃತಿ ಇರಾನಿ ಸವಾಲು

 ವನ್ಸದಾ : ರಾಹುಲ್​ ಗಾಂಧಿಗೆ ತಾಕತ್ತಿದ್ದರೆ ಗುಜರಾತ್​ನಿಂದ ಸ್ಪರ್ಧೆ ಮಾಡಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.

ಗುಜರಾತ್​ನಲ್ಲಿ ಮುನ್ಸಿಪಾಲ್​ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಸಚಿವೆ ರಾಗಾ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್​ನ ಹಾಗೂ ಇಲ್ಲಿನ ಜನರ ಬಗ್ಗೆ ಕಾಂಗ್ರೆಸ್​ಗೆ ದ್ವೇಷ ಮತ್ತು ಪೂರ್ವಗ್ರಹ ಪೀಡಿತ ಭಾವನೆ ಇದೆ ಎಂದಿದ್ದಾರೆ.

ಅಷ್ಟೇ ಅಲ್ಲ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು ಹಾಕಿದ್ದು, ತಾಕತ್ತಿದ್ದರೆ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದಿದ್ದಾರೆ. ಅಸ್ಸೋಂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್​ ಗಾಂಧಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದು, ಗುಜರಾತ್​ ಮೂಲದ ಚಹಾ ತೋಟದ ಮಾಲೀಕರಿಂದ ಅದನ್ನು ಭರಿಸುವಂತೆ ಮಾಡಲಾಗುವುದು ಎಂದಿದ್ದರು.

TRENDING