Saturday, April 17, 2021
Home ಜಿಲ್ಲೆ ಮೈಸೂರು ಹಿರಿಯ ಪತ್ರಕರ್ತ, ಬರಹಗಾರ ನಿರಂಜನ್ ನಿಕ್ಕಂ ನಿಧನ

ಇದೀಗ ಬಂದ ಸುದ್ದಿ

ಹಿರಿಯ ಪತ್ರಕರ್ತ, ಬರಹಗಾರ ನಿರಂಜನ್ ನಿಕ್ಕಂ ನಿಧನ

 ಮೈಸೂರುಹಿರಿಯ ಪತ್ರಕರ್ತ ಹಾಗೂ ಬರಹಗಾರ ನಿರಂಜನ್ ನಿಕ್ಕಂ (66) ಅವರು ಮಂಗಳವಾರ ರಾತ್ರಿ ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ನಿರಂಜನ್ ನಿಕ್ಕಂ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮೈಸೂರು ಬ್ಯೂರೊ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಇವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.

ಪಾರ್ಥೀವ ಶರೀರವನ್ನು ಇಲ್ಲಿನ ವಿಜಯನಗರದ 3ನೇ ಹಂತದ ಇವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಸಂಜೆ 4 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

TRENDING