Saturday, April 17, 2021
Home ಜಿಲ್ಲೆ ಮೈಸೂರು ಒಂಟಿ ಸಲಗ ದಾಳಿ : ಟ್ರಾಕ್ಟರ್ ಮತ್ತು ಕಾರು ಜಖಂ

ಇದೀಗ ಬಂದ ಸುದ್ದಿ

ಒಂಟಿ ಸಲಗ ದಾಳಿ : ಟ್ರಾಕ್ಟರ್ ಮತ್ತು ಕಾರು ಜಖಂ

ಮೈಸೂರು: ಒಂಟಿಸಲಗದ ದಾಳಿಯಿಂದಾಗಿ ಟ್ರಾಕ್ಟರ್ ಹಾಗೂ ಕಾರು ಜಖಂ ಆಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮುದಗನೂರು ಮತ್ತು  ಚಿಕ್ಕಹೆಜ್ಜೂರು ಹಾಡಿಯಲ್ಲಿ ಕಾರು ಹಾಗೂ ಟ್ರಾಕ್ಟರ್ ಜಖಂ ಆಗಿದೆ.

ಶ್ರೀನಿವಾಸ್ ಎಂಬುವವರಿಗೆ ಸೇರಿದ ಟ್ರಾಕ್ಟರ್ ಮತ್ತು  ಬಾಸ್ಕರ್ ಎಂಬುವವರಿಗೆ ಸೇರಿದ ಕಾರನ್ನ ಒಂಟಿ‌ಸಲಗ ದಾಳಿ ಮಾಡಿ‌ ಹಾನಿ ಮಾಡಿದೆ. ಸದ್ಯ ನಾಗಾಪುರ ವುಡ್ ಲಾಡ್ ಹತ್ತಿರ ಬೀಡು ಬಿಟ್ಟಿರುವ ಒಂಟಿ ಸಲಗವನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.

TRENDING