Tuesday, April 13, 2021
Home ಸುದ್ದಿ ಜಾಲ ಬಿಜೆಪಿ ಐಟಿ ಸೆಲ್‌ ವಿರುದ್ದ ತನಿಖೆಗೆ ಮುಂದಾದ ಮಹಾರಾಷ್ಟ್ರ ಸರ್ಕಾರ

ಇದೀಗ ಬಂದ ಸುದ್ದಿ

ಬಿಜೆಪಿ ಐಟಿ ಸೆಲ್‌ ವಿರುದ್ದ ತನಿಖೆಗೆ ಮುಂದಾದ ಮಹಾರಾಷ್ಟ್ರ ಸರ್ಕಾರ

ಮುಂಬೈ: ತಮ್ಮ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶ್ ಮುಖ್ ಸ್ಪಷ್ಟನೆ‌ ನೀಡಿದ್ದಾರೆ. ತಮ್ಮ ಸರ್ಕಾರ ಯಾವುದೇ ಸೆಲಿಬ್ರಿಟಿಗಳ ವಿರುದ್ದ ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರದ ಪರ ಟ್ವೀಟ್ ಮಾಡುವಂತೆ ಸೆಲಿಬ್ರಿಟಿಗಳಿಗೆ ಒತ್ತಡ ಹೇರಲಾಗುತ್ತಿದೆ. ನಾವು ಈ ಕುರಿತು ತನಿಖೆ ನಡೆಸಲಿದ್ದೇವೆ ಎಂಬ ದೇಶ್ ಮುಖ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಸರ್ಕಾರವು ಬಿಜೆಪಿ ಐಟಿ ಸೆಲ್ ಮೇಲೆ ತನಿಖೆ ನಡೆಸುತ್ತಿದೆಯೇ ಹೊರತು ಲತಾ ಮಂಗೇಶ್ಕರ್, ಸಚಿನ್ ತೆಂಡುಲ್ಕರ್ ಮುಂತಾದವರ ಮೇಲೆ ಅಲ್ಲ ಎಂದಿದ್ದಾರೆ.

TRENDING