Tuesday, April 13, 2021
Home ದೇಶ ವಾಹನ ಸವಾರರಿಗೆ ಶಾಕ್ -100 ರೂ ಸನಿಹಕ್ಕೆ ಪೆಟ್ರೋಲ್, ಡೀಸೆಲ್ ದರ

ಇದೀಗ ಬಂದ ಸುದ್ದಿ

ವಾಹನ ಸವಾರರಿಗೆ ಶಾಕ್ -100 ರೂ ಸನಿಹಕ್ಕೆ ಪೆಟ್ರೋಲ್, ಡೀಸೆಲ್ ದರ

 ನವದೆಹಲಿ: ಸತತ 8 ನೇ ದಿನವೂ ತೈಲ ದರ ಏರಿಕೆಯಾಗಿದೆ. ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ದರ 100 ರೂಪಾಯಿ ಸನಿಹಕ್ಕೆ ತಲುಪಿದೆ.

ಇಂದು ಪೆಟ್ರೋಲ್ ಪ್ರತಿ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ 35 ಪೈಸೆಯಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರಿಗೆ 89.29 ರೂ., ಡೀಸೆಲ್ ಲೀಟರ್ಗೆ 79.70 ರೂ.ಗೆ ಏರಿಕೆಯಾಗಿದೆ. ವ್ಯಾಟ್ ತೆರಿಗೆ, ಸಾಗಣೆ ವೆಚ್ಚ ಆಧರಿಸಿ ಆಯಾ ರಾಜ್ಯದಲ್ಲಿ ತೈಲ ದರದಲ್ಲಿ ವ್ಯತ್ಯಾಸವಿರುತ್ತದೆ.

ತೈಲ ಬೆಲೆ ನಿರಂತರ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್, ಡೀಸೆಲ್, ಜೊತೆಗೆ ಗ್ಯಾಸ್ ಬೆಲೆ ಕೂಡ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

TRENDING