ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ದೇಣಿಗೆ ನೀಡುವುದಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ಇಂದು ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕಾಗಿ ನನ್ನ ಬಳಿ ಕೂಡ ಹಣವನ್ನು ಕೇಳಲು ಬಂದಿದ್ದರು, ಆದರೆ ವಿವಾದಿತ ಮಂದಿರಕ್ಕೆ ದೇಣಿಗೆ ಕೊಡಲ್ಲ ಎಂದು ಹೇಳಿ ವಾಪಸ್ಸು ಅವರನ್ನು ಕಳುಹಿಸಿದೆ ಅಂತ ಹೇಳಿದರು.
ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಬೇರೆ ಎಲ್ಲಿಯಾದರೂ ನಿರ್ಮಾಣ ಮಾಡುವುದಿದ್ದರೆ ಕೊಡುತ್ತಿದ್ದೇ, ಆದರೆ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದು ವಿವಾದಿತ ಜಮೀನಿನಲ್ಲಿ.ಆದ ಕಾರಣ , ನಾನು ಅಲ್ಲಿ ಮಂದಿರ ನಿರ್ಮಾಣ ಮಾಡುವುದಕ್ಕೆ ದೇಣಿಗೆ ನೀಡದಿರಲು ಮನಸ್ಸು ಮಾಡಿರುವೆ ಅಂತ ಹೇಳಿದರು. ಅಯೋಧ್ಯೆಯಲ್ಲೇ ಮಂದಿರ ಕಟ್ಟಬೇಕು ಎಂಬ ಹಠ ಏಕೆ? ನಮ್ಮೂರಲ್ಲಿ ಇಲ್ಲವೇ ನಿಮ್ಮೂರಲ್ಲಿ ಕಟ್ಟಡ ಕಟ್ಟಲಲ್ಲಿ ಅಂತ ಹೇಳಿದ ಅವರು ಬೇರೆ ಕಡೆ ಕಟ್ಟಿದರೇ ಹಣ ನೀಡುತ್ತಿದೆ ಅಂತ ಹೇಳಿದರು.