Tuesday, April 13, 2021
Home ಕೋವಿಡ್-19 ರಾಜ್ಯದಲ್ಲಿ ಇಂದು 438 ಜನರಿಗೆ ಕೊರೋನಾ, ಸೋಂಕಿಗೆ 6 ಜನರು ಬಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಇಂದು 438 ಜನರಿಗೆ ಕೊರೋನಾ, ಸೋಂಕಿಗೆ 6 ಜನರು ಬಲಿ

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 438 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 9,46,076ಗೆ ಏರಿಕೆಯಾಗಿದೆ. ಅಲ್ಲದೇ ಇಂದು ಸೋಂಕಿತರಾದಂತ 6 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರದಲ್ಲಿ 306 ಜನರಿಗೆ ಸೇರಿದಂತೆ ರಾಜ್ಯಾಧ್ಯಂತ 438 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 9,46,076ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ.

ಇಂದು ಬೆಂಗಳೂರು ನಗರದಲ್ಲಿ ಸೋಂಕಿತರಾದಂತ 133 ಜನರು ಸೇರಿದಂತೆ 344 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 9,27,924 ಸೋಂಕಿತರು ಗುಣಮುಖರಾದಂತೆ ಆಗಿದೆ. ಅದ್ದರಿಂದ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 5,860 ಆಗಿದೆ ಎಂದು ತಿಳಿಸಿದೆ.

ಇನ್ನೂ ಇಂದು ಬೆಂಗಳೂರು ನಗರದಲ್ಲಿ ನಾಲ್ವರು, ಮೈಸೂರಿನಲ್ಲಿ ಇಬ್ಬರು ಸೇರಿದಂತೆ ಆರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 12,273ಕ್ಕೆ ಏರಿಕೆಯಾಗಿದೆ.

TRENDING