Saturday, April 17, 2021
Home ಜಿಲ್ಲೆ ಬಾಗಲಕೋಟೆ ಕೆನಾಲ್ ನಲ್ಲಿ ಅನುಮಾನಸ್ಪದವಾಗಿ ಯುವಕ ಸಾವು

ಇದೀಗ ಬಂದ ಸುದ್ದಿ

ಕೆನಾಲ್ ನಲ್ಲಿ ಅನುಮಾನಸ್ಪದವಾಗಿ ಯುವಕ ಸಾವು

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ-ಜಗದಾಳ ರಸ್ತೆಗೆ ಬರುವ ಘಟಪ್ರಭಾ ಎಡದಂಡೆ ಕಾಲುವೆಗೆ ಸಂಬಂಧಿಸಿದ ಕೆನಾಲ್ ನೀರಿನಲ್ಲಿ ವ್ಯಕ್ತಿಯರ‍್ವ ಸಾವಿಗೀಡಾದ ಘಟನೆ ರವಿವಾರ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ಯುವಕ ಬನಹಟ್ಟಿ ಮೂಲದ ಈಚೆಗಷ್ಟೇ ಬೆಳಗಾವಿಯಲ್ಲಿ ವಾಸವಾಗಿದ್ದ ಬದ್ರಿನಾಥ ಉದಯಕುಮಾರ ಕೋರ‍್ಡೆ(೨೪) ಎಂದು ಗರ‍್ತಿಸಲಾಗಿದೆ.

 ಬೆಳಗಾವಿಯಿಂದ ಸ್ವಂತ ಊರಾದ ಬನಹಟ್ಟಿಗೆ ಆಗಮಿಸಿದ್ದ ಬದ್ರಿನಾಥ ರವಿವಾರದಂದು ಮಧ್ಯಾಹ್ನ ಮೋಟಾರ್ ಸೈಕಲ್ ಮೇಲೆ ಬಂಡಿಗಣಿ-ಜಗದಾಳ ರಸ್ತೆಯ ಮೇಲೆ ಸಂಚರಿಸುವ ಸಂರ‍್ಭ ಬೈಕ್‌ಗೆ ರ‍್ಟ್ ಇಟ್ಟು ಕೆನಾಲ್‌ಗೆ ಜಿಗಿದುಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಶಂಕೆಯಾಗಿದೆ.

ವ್ಯಕ್ತಿ ಕೆನಾಲ್ ಒಳಗೆ ಸಿಲುಕಿರುವದನ್ನು ಗಮನಿಸಿದ ಮೂವರು 108 ಗೆ ಸಂಪರ್ಕಿಸಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕಳಿಸಲಾಗಿ, ಆತ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಮೆಲ್ನೋಟಕ್ಕೆ ಯಾವದೇ ಗಾಯ ಅಥವಾ ಕಲೆಗಳಿಲ್ಲವೆಂದು ಪೊಲೀಸ್ ಮೂಲಗಳಿಂದ ತಿಳಿದಿದ್ದು, ಈ ಕುರಿತು ಬನಹಟ್ಟಿ ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಸ್ಥಳ ಪರಿಶೀಲನೆ ನಡೆಸಿ ಶವ ಪರೀಕ್ಷೆ ನಂತರ ಸಾವಿನ ಬಗ್ಗೆ ಸ್ಪಷ್ಟ ಚಿತ್ರಣ ತಿಳಿಯಲಿದೆ ಎಂದು ತಿಳಿಸಿದ್ದು, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕಾಶ ಕುಂಬಾರ

ವಿ ನ್ಯೂಸ್ 24ಕನ್ನಡ

ಬಾಗಲಕೋಟೆ

TRENDING