Tuesday, April 13, 2021
Home ಸುದ್ದಿ ಜಾಲ ಸಿಕ್ಕಿಂ : 6 ರಿಂದ10 ನೇ ತರಗತಿಯ ಬಾಲಕಿಯರಿಗೆ ಆತ್ಮರಕ್ಷಣೆ ತರಬೇತಿ

ಇದೀಗ ಬಂದ ಸುದ್ದಿ

ಸಿಕ್ಕಿಂ : 6 ರಿಂದ10 ನೇ ತರಗತಿಯ ಬಾಲಕಿಯರಿಗೆ ಆತ್ಮರಕ್ಷಣೆ ತರಬೇತಿ

ಸಿಕ್ಕಿಂ :ಸಿಕ್ಕಿಂನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯ ಬಾಲಕಿಯರಿಗೆ ಸ್ವರಕ್ಷಣೆ ತರಬೇತಿ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆತ್ಮರಕ್ಷಣೆ ತರಬೇತಿ ನೀಡಲಾಗುವುದು ಎಂದು ಶಿಕ್ಷಣ ವಿಭಾಗದ ವಿಶೇಷ ಕಾರ್ಯದರ್ಶಿ ಭೀಮ್ ಥಾಟಲ್ ಅವರು ಭಾನುವಾರ ಸ್ಯಾಮ್‌ಡಾಂಗ್ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಬಾಲಕಿಯರ ಸ್ವರಕ್ಷಣೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಹೇಳಿದರು.

ಆತ್ಮರಕ್ಷಣಾ ತರಬೇತಿಯು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸುವುದರ ಜೊತೆಗೆ ಭವಿಷ್ಯದ ಅಡೆತಡೆಗಳಿಗೆ ಅವರನ್ನು ಸಿದ್ಧಪಡಿಸುವುದಾಗಿದೆ ಎಂದು ಥಾಟಾಲ್ ಹೇಳಿದರು.

ಬಾಲಕಿಯರಿಗೆ ಟೇಕ್ವಾಂಡೋ, ಕರಾಟೆ, ಬಾಕ್ಸಿಂಗ್ ಮತ್ತು ಕಿಕ್ ಬಾಕ್ಸಿಂಗ್ ತರಬೇತಿ ನೀಡಲಾಗುವುದು ಎಂದರು

TRENDING