Saturday, April 17, 2021
Home ರಾಜಕೀಯ ಮತ್ತೆ ಬಿಎಸ್‍ವೈ 'ಫ್ಯಾಮಿಲಿ ಪಾಲಿಟಿಕ್ಸ್' ವಿರುದ್ಧ ಶಾಸಕ ಯತ್ನಾಳ್ ಗುಡುಗು

ಇದೀಗ ಬಂದ ಸುದ್ದಿ

ಮತ್ತೆ ಬಿಎಸ್‍ವೈ ‘ಫ್ಯಾಮಿಲಿ ಪಾಲಿಟಿಕ್ಸ್’ ವಿರುದ್ಧ ಶಾಸಕ ಯತ್ನಾಳ್ ಗುಡುಗು

ವಿಜಯಪುರ, ಫೆ.15- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹರಿಹಾಯ್ದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈಗೆ ಮುಕ್ತವಾಗಿ ಕೆಲಸ ಮಾಡಲು ವಿಜಯೇಂದ್ರನೇ ಬಿಡುತ್ತಿಲ್ಲ. ಯಡಿಯೂರಪ್ಪ ಹೆಸರು ಕೆಡಿಸುತ್ತಿರುವವರು ಅವರ ಪರಿವಾರದವರೇ.

ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪದಿಂದಲೇ ಸಿಎಂ ಬದಲಾಗಿದ್ದಾರೆ. ವಿಜಯೇಂದ್ರ ಕೈ-ಕಾಲು ಒತ್ತುವವರಿಗೆ, ರಾತ್ರಿ ವ್ಯವಸ್ಥೆ ಮಾಡುವವರಿಗೆ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ತಮಗೆ ಆಗದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರ ಬಳಿ ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇದೆ.ಯಡಿಯೂರಪ್ಪ ಕುಟುಂಬ ಇತ್ತೀಚೆಗೆ ಮಾರಿಷಸ್ಗೆ ವಿಮಾನದಲ್ಲಿ ಹೋಗಿದ್ದು ಏಕೆ? ಅಲ್ಲಿ ಏನು ಹಣದ ವ್ಯವಹಾರ ಇದೆ. ರಾಜ್ಯದ ಜನರಿಗೆ ಇದು ತಿಳಿಯಬೇಕು ಎಂದು ಹೇಳಿದರು.

ಸಿಎಂ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಈಗ ಸಿಎಂ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರುತ್ತಿರಲಿಲ್ಲ. ಅಡುಗೆ ಮಾಡುವವ ಮತ್ತೊಬ್ಬ ಮಾತ್ರ ಆಗ ಇರುತ್ತಿದ್ದರು. ಈಗ ಸಿಎಂ ಆದ ನಂತರ ಅವರ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿ ಬಿಟ್ಟಿದೆ. ಅವರ ಕುಟುಂಬದಿಂದ ಸಿಎಂ ಹೆಸರು ಕೆಡುತ್ತಿದೆ. ಯಡಿಯೂರಪ್ಪ ಸಂಪೂರ್ಣವಾಗಿ ಬದಲಾಗಿದ್ದಾರೆ. ವಿಶೇಷವಾಗಿ ವಿಜಯೇಂದ್ರ, ಅವರ ಕುಟುಂಬದವರಿಂದ ಹೆಸರು ಕೆಟ್ಟಿದೆ.

ವಿಜಯೇಂದ್ರ ಅವರ ಚೇಲಾಗಳು, ಅವರಿಗೆ ರಾತ್ರಿ ವ್ಯವಸ್ಥೆ ಮಾಡುವವರೆಲ್ಲ ಈಗ ನಿಗಮ-ಮಂಡಳಿ ಅಧ್ಯಕ್ಷ, ನಿರ್ದೇಶಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ವಿಜಯೇಂದ್ರನ ತಂಡವಿದೆ, ವಸೂಲಿ, ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರದು ದೊಡ್ಡ ತಂಡವಿದೆ. ತಮಗೆ ಬೇಡವಾದವರ ನಕಲಿ ಸಿಡಿ ತಯಾರಿಸುವ ಕೇಂದ್ರವಿದೆ. ಈ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ. ಹಾವು, ಚೇಳುಗಳು ಪಕ್ಷ ಕಟ್ಟಿವೆ. ಯಡಿಯೂರಪ್ಪ ಹಿಂದೆ ಪಕ್ಷ ಕಟ್ಟಿದಾಗ ಅವರ ಕಾರಿಗೆ ಪೆಟ್ರೋಲ್ ಹಾಕಿದ್ದೇನೆ. ಆದರೆ, ಸಿಎಂ ಈಗ ಪುತ್ರ ವ್ಯಾಮೋಹದ ಪರಾಕಾಷ್ಠೆ ತಲುಪಿದ್ದಾರೆ ಎಂದು ಯತ್ನಾಳ ಟೀಕೆ ಮಾಡಿದರು.

ಸಿಎಂ ಯಡಿಯೂರಪ್ಪ ಈಗ ಸಂಪೂರ್ಣ ಬದಲಾಗಿದ್ದಾರೆ, ಅವರ ಮಗ ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ, ಸರ್ಕಾರದ ಆಡಳಿತದಲ್ಲಿ ಸಂಪೂರ್ಣವಾಗಿ ವಿಜಯೇಂದ್ರ ಹಸ್ತಕ್ಷೇಪವಿದೆ, ಇದಕ್ಕೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾಗಿರುವವರೇ ಸಾಕ್ಷಿ, ವಿಜಯೇಂದ್ರ ಅವರ ಕೈ-ಕಾಲು ಒತ್ತುವವರನ್ನು, ರಾತ್ರಿ ವ್ಯವಸ್ಥೆ ಮಾಡುವವರಿಗೆ ಅವರಿಗೆ ಬೇಕಾದವರನ್ನು ನೇಮಕ ಮಾಡಲಾಗುತ್ತಿದೆ. ಇವ್ಯಾವುದೂ ಸಿಎಂ ಗಮನಕ್ಕೆ ಬರುತ್ತಿಲ್ಲ. ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲದಂತಾಗಿದೆ. ಹಾವು-ಚೇಳುಗಳು ಸಿಎಂ ಅವರ ಮನೆಯಲ್ಲಿವೇ ಇವೆ ಎಂದು ಹರಿಹಾಯ್ದರು.

ಯಡಿಯೂರಪ್ಪ ಕುಟುಂಬದವರೇ ಹಾವು, ಚೇಳಾಗಿ ತೊಂದರೆ ನೀಡುತ್ತಿದ್ದಾರೆ. ತಮಗೆ ಆಗದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರ ಬಳಿ ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇವೆ. ಯಡಿಯೂರಪ್ಪ ಕುಟುಂಬ ಇತ್ತೀಚೆಗೆ ಮಾರಿಷಸ್‍ಗೆ ವಿಮಾನದಲ್ಲಿ ಹೋಗಿದ್ದು ಏಕೆ, ಅಲ್ಲಿ ಏನು ಹಣದ ವ್ಯವಹಾರ ನಡೆದಿದೆ ಎಂದು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದರು.

ವಿಜಯಪುರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಗುರುತಿಸಿರುವ ಜಾಗದ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಅನುದಾನ ಒಟ್ಟು 385 ಕೋಟಿ ರೂ.ಬಿಡುಗಡೆ ಮಾಡುತ್ತಿದ್ದಾರೆ. ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ ನೀಡಿದ್ದು ಕೇವಲ 95 ಕೋಟಿ ರೂ., ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.

ಸುತ್ತೂರು ಶ್ರೀಗಳಿಗೆ ವೀರಶೈವ ಲಿಂಗಾಯಿತರ ನೇತೃತ್ವ ತೆಗೆದುಕೊಳ್ಳಲು ಹೇಳಿದ್ದಾರೆ. ಮೊನ್ನೆ ವೀರಶೈವ ಲಿಂಗಾಯಿತರನ್ನು ಒಡೆಯಲು ಪ್ರಯತ್ನಿಸಿದರು. ಅದು ವಿಫಲವಾಯಿತು. ವೀರಶೈವ ಲಿಂಗಾಯಿತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ನಮ್ಮದು ಕಾಂಗ್ರೆಸ್, ಮುಲಾಯಂ ಸಿಂಗ್, ಲಾಲೂ ಪ್ರಸಾದ್, ದೇವೇಗೌಡರಂತೆ ಕುಟುಂಬ ಪಕ್ಷವಲ್ಲ.

ನಮ್ಮದು ಕಾರ್ಯಕರ್ತರ ಪಕ್ಷ. ಪ್ರಧಾನಿಯ ಆಶಯದಂತೆ ಕುಟುಂಬ ರಾಜಕೀಯ ಬಿಡಬೇಕು. ಆದ್ದರಿಂದ ವಿಜಯೇಂದ್ರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಬಾರದು. ಒಬ್ಬರು ಮಾತ್ರ ರಾಜಕೀಯ ಮಾಡಿ. ಬೆಂಗಳೂರಿನಲ್ಲಿ ನಿಮಗೆ ಸೇರಿದ ಸಾಕಷ್ಟು ವ್ಯವಹಾರವಿದೆ. ನೂರಾರು ಮನೆಗಳಿವೆ ಎಂದು ಯತ್ನಾಳ ಕಿವಿ ಮಾತು ಹೇಳಿದರು.

ಇದೇ ವೇಳೆ, ತಮ್ಮ ಜೀವಕ್ಕೆ ಅಪಾಯವಿರುವುದರಿಂದ ಸರ್ಕಾರ ಎರಡು ದಿನಗಳಿಂದ ತಮಗೆ ಪೊಲೀಸ್ ಭದ್ರತೆ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪೊಲೀಸ್ ಎಸ್ಕಾರ್ಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‍ತಿಳಿಸಿದರು.

ಬಿಜೆಪಿ ಪಕ್ಷದಿಂದ ಈಗಾಗಲೇ ಯತ್ನಾಳ್ ಅವರಿಗೆ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಕ್ಕಾಗಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಆದರೆ, ಅವ್ಯಾವುದಕ್ಕೂ ಅವರು ಕ್ಯಾರೇ ಎನ್ನುತ್ತಿಲ್ಲ ಎಂದು ಮತ್ತೆ ಸಿಎಂ ಮೇಲೆ ವಿಜಯಪುರದಲ್ಲಿ ವಾಗ್ದಾಳಿ ಮುಂದುವರಿಸಿದ್ದಾರೆ.

TRENDING