Saturday, April 17, 2021
Home ದೆಹಲಿ ವಕೀಲೆ ನಿಖಿತಾ ಜಾಕೋಬ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಇದೀಗ ಬಂದ ಸುದ್ದಿ

ವಕೀಲೆ ನಿಖಿತಾ ಜಾಕೋಬ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

 ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಕೀಲೆ ನಿಖಿತಾ ಜಾಕೋಬ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ಪ್ರಕರಣ ಬೆಳಕಿಗೆ ಬಂದ ಬಳಿಕ ನಿಖಿತಾ ಜಾಕೋಬ್ ನಾಪತ್ತೆಯಾಗಿದ್ದರು. ತನಿಖೆಗೆ ಸಹಕರಿಸುವುದಾಗಿ ಹೇಳಿದ್ದ ನಿಖಿತಾ ಬಳಿಕ ಭೂಗತರಾಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ದೆಹಲಿ ನ್ಯಾಯಾಲಯ ನಿಖಿತಾ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಗ್ರೇಟಾ ಥನ್ ಬರ್ಗ್, ಟೂಲ್ ಕಿಟ್ ಅಥವಾ ಫೈಲ್ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ದೇಶದಲ್ಲಿ ಸರ್ಕಾರಿ ವಿರೋಧಿ ಅಲೆ ಮೂಡಿಸಿರುವ ಟೂಲ್ ಕಿಟ್ ಇದಾಗಿದ್ದು, ಈ ಟೂಲ್ ಕಿಟ್ ನ್ನು ಬೆಂಗಳೂರು ಮೂಲದ ದಿಶಾ ರವಿ ತಯಾರಿಸಿದ್ದಾರೆ ಎಂಬ ಆರೋಪ ಕೆಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ದಿಶಾ ರವಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

TRENDING