Saturday, April 17, 2021
Home ಸುದ್ದಿ ಜಾಲ ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ನಟ ‘ಸೋನು ಸೂದ್’

ಇದೀಗ ಬಂದ ಸುದ್ದಿ

ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ನಟ ‘ಸೋನು ಸೂದ್’

ಮುಂಬೈ: ಸಿನಿ ಪರದೆಯ ಮೇಲೆ ವಿಲನ್​ ಆಗಿ ಕಾಣಿಸಿಕೊಂಡು, ನಿಜ ಜೀವನದಲ್ಲಿ ಹೀರೋ ಆದ ಸೋನು ಸೂದ್​ ಇದೀಗ ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಜನರನ್ನು ಗುರುತಿಸಿ, ಅವರು ಮಾಡುತ್ತಿರುವ ಸಹಾಯಕ್ಕೆ ಜನರು ಕೈ ಮುಗಿದು ನಮಸ್ಕರಿಸಲಾರಂಭಿಸಿದ್ದಾರೆ.

ಕೆಲಸವಿಲ್ಲದವರು ಸ್ವಾವಲಂಭಿಯಾಗಿ ಬದುಕು ಆರಂಭಿಸಬೇಕು ಎನ್ನುವ ಕಾರಣಕ್ಕೆ ಸೋನು ಸೂದ್​ ಇ ರಿಕ್ಷಾಗಳನ್ನು ಖರೀದಿಸಿದ್ದಾರೆ. 100 ಇ ರಿಕ್ಷಾಗಳನ್ನು ಖರೀದಿಸಿ ಅದನ್ನು ಕೆಲಸವಿಲ್ಲದವರಿಗೆ ಕೊಟ್ಟಿದ್ದಾರೆ. ಇಷ್ಟು ದಿನ ಖಾಲಿ ಕುಳಿತಿದ್ದ ಜನರು ಇದೀಗ ಈ ಇ-ಆಟೋರಿಕ್ಷಾಗಳಿಂದ ತಮ್ಮ ಜೀವನವನ್ನು ನಿರ್ಮಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಬದುಕಲ್ಲಿ ಏನೂ ಉಳಿದಿಲ್ಲ ಎಂದುಕೊಂಡಿದ್ದಾಗಿ ಸೋನು ಸೂದ್​ ದೇವರ ರೂಪದಲ್ಲಿ ಬಂದಿದ್ದಾರೆ ಎಂದು ತುಂಬು ಮನಸ್ಸಿನಿಂದ ಧನ್ಯವಾದ ಅರ್ಪಿಸಿದ್ದಾರೆ.

ಇ ರಿಕ್ಷಾಗಳನ್ನು ಪಡೆದ ಜನರ ಕಣ್ಣಲ್ಲಿನ ಸಂತೋಷವನ್ನು ತೋರುವ ಒಂದು ವಿಡಿಯೋವನ್ನು ಸೋನು ಸೂದ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಪ್ರಯಾಣವನ್ನು ವಿಶೇಷವಾಗಿಸಿದೆ ಎಂದು ಹೇಳಿದ್ದಾರೆ.

ಸಿನಿಮಾಗಳಲ್ಲಿ ವಿಲನ್​ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಸೂದ್​ ಲಾಕ್​ಡೌನ್​ ಸಮಯದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ದೂರದ ಊರಿಗೆ ನಡೆದು ಹೋಗುತ್ತಿದ್ದ ಜನರಿಗೆ ಅವರು ಮಾಡಿದ ಸಹಾಯ ದೇಶದ ಚಿತ್ರರಂಗವನ್ನು ಬಡಿದೆಬ್ಬಿಸಿತ್ತು. ಸಾವಿರಾರು ಜನರು ಸೂದ್​ ಸಹಾಯದಿಂದಾಗಿ ನಿಟ್ಟುಸಿರು ಬಿಡುವಂತಾಗಿತ್ತು.

TRENDING