Saturday, April 17, 2021
Home ಸುದ್ದಿ ಜಾಲ ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರಕ್ಕೆ ಅಮಿತ್ ಶಾ ರಣತಂತ್ರ! : ಬಿಪ್ಲಬ್ ಕುಮಾರ್ ದೇಬ್

ಇದೀಗ ಬಂದ ಸುದ್ದಿ

ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರಕ್ಕೆ ಅಮಿತ್ ಶಾ ರಣತಂತ್ರ! : ಬಿಪ್ಲಬ್ ಕುಮಾರ್ ದೇಬ್

 ನಮ್ಮ ನೆರೆಹೊರೆಯ ದೇಶಗಳಾದ ನೇಪಾಳ ಮತ್ತು ಶ್ರೀಲಂಕಾದಲ್ಲೂ ಸರ್ಕಾರ ರಚಿಸುವ ಗುರಿ ಹೊಂದಿದೆಯಾ ಬಿಜೆಪಿ..? ಇಂಥಾದೊಂದು ಅನುಮಾನಕ್ಕೆ ಕಾರಣವಾಗಿರೋದು ತ್ರಿಪುರ ಸಿಎಂ ಬಿಪ್ಲಬ್ ಕುಮಾರ್​ ದೇಬ್ ಕೊಟ್ಟಿರೋ ಹೇಳಿಕೆ. ಹೌದು, ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ತ್ರಿಪುರಕ್ಕೆ ಬಂದಿದ್ರು. ಈ ವೇಳೆ ನಮ್ಮ ಜೊತೆ ಮಾತನಾಡುವಾಗ, ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ನೇಪಾಳ ಮತ್ತು ಶ್ರೀಲಂಕಾ ಮಾತ್ರ ಉಳ್ಕೊಂಡಿದೆ. ಹೀಗಾಗಿ ನಮ್ಮ ಪಕ್ಷವನ್ನ ನೇಪಾಳ ಮತ್ತು ಶ್ರೀಲಂಕಾದವರೆಗೆ ವಿಸ್ತರಿಸಿ, ಅಲ್ಲೂ ಗೆಲ್ಲಬೇಕು ಅಂತ ಅಮಿತ್ ಶಾ ಹೇಳಿದ್ದರು ಅಂತ ಬಿಪ್ಲಬ್ ದೇಬ್​ ಬಾಯ್ಬಿಟ್ಟಿದ್ದಾರೆ. ಇದೇ ಈಗ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದ ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸಿದಂತಾಗುತ್ತೆ. ಭಾರತದ ವಿದೇಶಾಂಗ ನೀತಿಗೂ ವಿರುದ್ಧವಾಗಿದೆ ಅಂತ ವಿಪಕ್ಷಗಳು ಕಿಡಿಕಾರಿವೆ. ಜೊತೆಗೆ ಈ ಬಗ್ಗೆ ತನಿಖೆ ನಡೆಸಬೇಕು ಅಂತ ಆಗ್ರಹಿಸಿವೆ.

TRENDING