Saturday, April 17, 2021
Home ಸುದ್ದಿ ಜಾಲ ವಾಹನ ಸವಾರರಿಗೆ ಮತ್ತೊಂದು ಶಾಕ್: ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಶುಲ್ಕ

ಇದೀಗ ಬಂದ ಸುದ್ದಿ

ವಾಹನ ಸವಾರರಿಗೆ ಮತ್ತೊಂದು ಶಾಕ್: ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಶುಲ್ಕ

 ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಇಂದು ಮಧ್ಯರಾತ್ರಿಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿರುತ್ತದೆ. ಟೋಲ್ ಶುಲ್ಕವನ್ನು ಫಾಸ್ಟ್ಯಾಗ್ ಮೂಲಕವೇ ಪಾವತಿಸಬೇಕಾಗಿದೆ.

ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಎರಡುಪಟ್ಟು ಶುಲ್ಕ ವಿಧಿಸಲಾಗುವುದು. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಬಗ್ಗೆ ಮಾಹಿತಿ ನೀಡಿದ್ದು, ಇ-ಪೇಮೆಂಟ್ ಸೌಲಭ್ಯ ಹೊಂದಿದ ಫಾಸ್ಟ್ಯಾಗ್ ಅನ್ನು ವಾಹನ ಮಾಲೀಕರು ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈಗಾಗಲೇ ಮೂರು ಸಲ ಗಡುವು ವಿಸ್ತರಣೆ ಮಾಡಲಾಗಿದ್ದು ಮತ್ತೆ ಫಾಸ್ಟ್ಯಾಗ್ ಗಡುವು ವಿಸ್ತರಿಸುವುದಿಲ್ಲ ವೆಂದು ಹೇಳಿದ್ದಾರೆ.

TRENDING