Saturday, April 17, 2021
Home ಸುದ್ದಿ ಜಾಲ ಮತ್ತೆ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಏರಿಕೆ

ಇದೀಗ ಬಂದ ಸುದ್ದಿ

ಮತ್ತೆ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಏರಿಕೆ

ಧ್ರವೀಕರಿಸಿದ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಮನೆಬಳಕೆ ಸಿಲಿಂಡರ್‌ನ (14.2 ಕೆಜಿ) ಬೆಲೆಯನ್ನು 50 ರೂ.ಗಳವರೆಗೂ ಏರಿಸಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಇನ್ನು ಮುಂದೆ 769ರೂ/ಸಿಲಿಂಡರ್‌ ಇರಲಿದೆ.

ಫೆಬ್ರವರಿಯಲ್ಲಿ ಮಾಡಲಾದ ಎರಡನೇ ಬೆಲೆ ಏರಿಕೆ ಇದಾಗಿದೆ. ಸಬ್ಸಿಡಿ ಇಲ್ಲದ ಸಿಲಿಂಡರ್‌ಗಳ ಬೆಲೆಯನ್ನು ಫೆಬ್ರವರಿ 4ರಂದು 25ರೂ/ಸಿಲಿಂಡರ್‌ನಂತೆ ಏರಿಸಲಾಗಿತ್ತು.

ಎಲ್‌ಪಿಜಿಯ ಜಾಗತಿಕ ಮಾರುಕಟ್ಟೆಯ ಟ್ರೆಂಡ್‌ಗಳನ್ನು ಆಧರಿಸಿ ಇಂಧನ ಸಗಟುದಾರರು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತಿರುತ್ತಾರೆ.

TRENDING