Monday, March 8, 2021
Home ಜಿಲ್ಲೆ ಕೊಪ್ಪಳ ERSS 112 ಗೆ ಕರೆ ಆಧಾರದ ಮೇಲೆ ಬ್ಲಾಕ್ ಸ್ಕಾರ್ಪಿಯೋ ಹೆದ್ದಾರಿ ಸುಲಿಗೆಕೋರರನ್ನು ಬಂಧಿಸಿದ...

ಇದೀಗ ಬಂದ ಸುದ್ದಿ

ERSS 112 ಗೆ ಕರೆ ಆಧಾರದ ಮೇಲೆ ಬ್ಲಾಕ್ ಸ್ಕಾರ್ಪಿಯೋ ಹೆದ್ದಾರಿ ಸುಲಿಗೆಕೋರರನ್ನು ಬಂಧಿಸಿದ ಮುನಿರಾಬಾದ್ ಪೊಲೀಸರು

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತೆಲಸಂಗ ಗ್ರಾಮದ ಗ್ರಾಮದ ದಸ್ತಗೀರ್ ಸಾಬ್ ತಂದೆ ಮಾಬುಸಾಬ್ ನದಾಫ್ ಎಂಬ ಇವರು ಮತ್ತು ಅಣ್ಣಪ್ಪ ಟೋಪನಗೋಳ ಇಬ್ಬರು ಸೇರಿಕೊಂಡು ದಿನಾಂಕ 10.02.2021  ರಂದು ರಾತ್ರಿ 8 ಮೂವತ್ತು ಕ್ಕೆ ಸುಮಾರು ಕುಷ್ಟಗಿ ಹೊಸಪೇಟೆ ಎನ್ಎಚ್ ಐವತ್ತರ ಮಾರ್ಗವಾಗಿ ಹೊರಡುತ್ತಿದ್ದ ಸಂದರ್ಭದಲ್ಲಿ ರಸ್ತೆ ಮೇಲೆ ಶಹಾಪುರ್ ಕ್ರಾಸ್ ಹತ್ತಿರ ಬುಲೆರೋ ವಾಹನದಲ್ಲಿ ದ್ರಾಕ್ಷಿ ಲೋಡ್ ತೆಗೆದುಕೊಂಡು ವಿಜಯಪುರದಿಂದ ಬೆಂಗಳೂರಿಗೆ ಹೊರಟಿರುವಾಗ ಎಂಎಚ್ ಪಾಸಿಂಗ್ ಇರುವ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದ 4 ಜನ ಆರೋಪಿತರು ಬೊಲೆರೋ ಪಿಕಪ್ ವಾಹನವನ್ನು ಅಡ್ಡಗಟ್ಟಿ ಅಲ್ಲಿದ್ದ ಇಬ್ಬರಿಗೂ ಕೈಯಿಂದ ಹೊಡೆದು ಬಡೆದು ಕಾಲಿನಿಂದ ಒದ್ದು ಇಬ್ಬರಿಗೂ ಬೊಲೆರೊ ವಾಹನದಿಂದ ಎಳೆದು ಹೊರಗೆ ಹಾಕಿ ವಾಹನವನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ .

ಈ ಪೈಕಿ ಘಟನೆ ನಡೆದ ಸ್ಥಳದಿಂದ ಈ ERSS 112  ಗೆ ಕರೆ ಬಂದಿದ್ದು ಈ ಪೈಕಿ ಕಾರ್ಯಪ್ರವೃತ್ತರಾದ ಗ್ರಾಮೀಣ ಪೊಲೀಸ್ ಠಾಣಾಧಿಕಾರಿಗಳು

ಎಸ್ಪಿ ಟಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ವೆಂಕಟಪ್ಪನಾಯಕ ಅವರ ಮತ್ತು ಗ್ರಾಮೀಣ ಸಿಪಿಐ ಆದ ವಿಶ್ವನಾಥ ಹಿರೇಗೌಡರ್ ಅವರ ಸಹಭಾಗಿತ್ವದಲ್ಲಿ. ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಸೈ ಆದ ಸುಪ್ರೀತ್ ವಿ ಹಾಗೂ ಸಿಬ್ಬಂದಿಗಳಾದ ಶರಣಪ್ಪ ಎಎಸ್ ಐ ಕೃಷ್ಣ ಭಂಡಾರಿ ಹಾಗೂ ಸಿಪಿಸಿ ರವರೊಂದಿಗೆ ಪ್ರಕರಣದಲ್ಲಿಯ ಸ್ಕಾರ್ಪಿಯೋ ಕಾರಿನ ಬಣ್ಣ ವನ್ನು ಆಧರಿಸಿ ಪತ್ತೆ ಕುರಿತು ತೆಲಸಂಗ ಗ್ರಾಮ ಮತ್ತು ಕಕಮರಿ ಗ್ರಾಮಗಳ ಕಡೆಗೆ ಹೋದಾಗ ದಿನಾಂಕ ೧೪.೨.೨೦೨೧ ರಂದು ಬೆಳಿಗ್ಗೆ 6 ಗಂಟೆಗೆ ಆರೋಪಿತನಾದ ಅಮೋಗಘ ಸಿದ್ಧ ಕುಮಾರ ತಂದೆ ದುರುಗಪ್ಪ ಪೂಜಾರ್ . ಬಸವರಾಜ ತಂದೆ ಮಲ್ಲಪ್ಪ ಸಿಂಧೂರ ಇವರುಗಳನ್ನು ಬೆಳಗಾವಿಯ ಸಮೀಪ ಬಂಧಿಸಿದ್ದು ಕೃತ್ಯಕ್ಕೆ ಉಪಯೋಗಿಸಿದ ಸ್ಕಾರ್ಪಿಯೋ ಕಾರು ಸಂಖ್ಯೆ ಕೆ ಎ 35/ಎಂ  9405 ಅನ್ನು ವಶಕ್ಕೆ ತೆಗೆದುಕೊಂಡು  ಇಬ್ಬರನ್ನು ಸೆರೆಹಿಡಿದಿರುತ್ತಾರೆ.

 ಈ ಪೈಕಿ ಇನ್ನೂ ಇಬ್ಬರು ತಲೆಮರಿಸಿಕೊಂಡಿದ್ದು ಪ್ರಕರಣವು ಇನ್ನೂ ತನಿಖಾ ಹಂತದಲ್ಲಿದೆ .

 ಮಂಜು ಬಿ ತೋಟಗೇರ್

ವಿ ನ್ಯೂಸ್ ೨೪ ಕನ್ನಡ

ಕೊಪ್ಪಳ .

TRENDING