Tuesday, April 13, 2021
Home ಜಿಲ್ಲೆ ಜಿಲ್ಲಾ ಸುದ್ದಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ: ಶಾಸಕ ರಾಘವೇಂದ್ರ ಹಿಟ್ನಾಳ್

ಇದೀಗ ಬಂದ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ: ಶಾಸಕ ರಾಘವೇಂದ್ರ ಹಿಟ್ನಾಳ್

ಕೊಪ್ಪಳ: ಸಿದ್ದರಾಮಯ್ಯ ಸಾಹೇಬರು ಒಂದು ಸಮಾಜದ ಲೀಡರ್ ಅಲ್ಲ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್​ ಹೇಳಿದರು. ಸಿದ್ದರಾಮಯ್ಯನವರು ಕಾರ್ಯಕ್ರಮ ಮುಂದುವರಿಸಿದ್ರೆ ಸಾಕಾಗಿತ್ತು. BJPಯವರು ಸಿದ್ದರಾಮಯ್ಯನವರ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಕುರುಬರ ST ಮೀಸಲಾತಿ ಹೋರಾಟದ ಹಿಂದೆ RSS ಇದೆ. RSS​ನವರೇ ಮೀಸಲಾತಿ ಹೋರಾಟ ಆರಂಭಿಸಿದ್ದಾರೆ ಎಂದು ಶಾಸಕ ಹಿಟ್ನಾಳ್​​ ಹೇಳಿದರು. ಜೊತೆಗೆ, ಈ ಹೋರಾಟ ಆರಂಭಿಸಿದ RSS​ಗೆ ಮುಳುವಾಗುತ್ತೆ ಎಂದು ಸಹ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ.

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ ಎಂದು ST ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪನಿಗೆ ಶಾಸಕ ರಾಘವೇಂದ್ರ ಹಿಟ್ನಾಳ್​ ಟಾಂಗ್​ ಕೊಟ್ಟರು. ಏನೋ ವಯಸ್ಸಾಗಿದೆ ಕಂಟ್ರೋಲ್ ತಪ್ಪುತ್ತಾರೆ ಎಂದ ಹಿಟ್ನಾಳ್​ ಸಿದ್ದರಾಮಯ್ಯ ಕೊಪ್ಪಳಕ್ಕೆ ಬಂದರೆ ನಾನು ಕ್ಷೇತ್ರ ಬಿಟ್ಟುಕೊಡುವೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್​ ಹೇಳಿದರು.

ಮಂಜು ಬಿ ತೋಟಗೇರ್ .

ವಿ ನ್ಯೂಸ್ ೨೪ ಕನ್ನಡ

ಕೊಪ್ಪಳ .

TRENDING