Tuesday, April 13, 2021
Home ಅಂತರ್ ರಾಷ್ಟ್ರೀಯ ಇಟಲಿ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕಾರ

ಇದೀಗ ಬಂದ ಸುದ್ದಿ

ಇಟಲಿ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕಾರ

ರೋಮ್: ಇಟಲಿಯ ನೂತನ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕರಿಸಿದ್ದಾರೆ.

ಇಟಲಿಯ ಪ್ರಧಾನಿಯಾಗಲು ಅವರು ಸಂಸತ್ತಿನ ಅತಿದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ವಾರ ಸರ್ಕಾರವು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸೂಪರ್ ಮಾರಿಯೋ ಖ್ಯಾತಿಯ ಮಾರಿಯೋ ದ್ರಾಘಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಅಭಿವೃದ್ಧಿ ನಡೆಯಲಿದೆ ಎಂದು ಪಕ್ಷದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಟಲಿ ಇನ್ನೂ ಸಾಂಕ್ರಾಮಿಕ ರೋಗ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶದಲ್ಲಿ ಕೊರೋನಾ ಸೋಂಕಿಗೆ ಈವರೆಗೆ 93,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

TRENDING