ಬೆಂಗಳೂರು: ಪಾರ್ಟಿ ಮಾಡಿದ್ದ 36 ಜನರಿಗೆ ಕೊರೋನ ಸೊಂಕು ಅಂಟಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಬಿಟಿಎಂ ಲೇ ಔಟ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ಕಳೆದ ಒಂದು ವಾರದ ಹಿಂದೆ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದ 36 ಮಂದಿಯಲ್ಲಿ ಕರೋನ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇನ್ನೂ ಅಪಾರ್ಟ್ಮೆಂಟ್ ಜಾಗಕ್ಕೆ ಬಿಬಿಎಂಪಿ ಅಧಿಕಾರಿಗಳು ತೆರಳಿದ್ದು, ಅಪಾರ್ಟ್ನ ಎಲ್ಲಾ ನಿವಾಸಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇನ್ನೂ ಸೊಂಕಿತ 36 ಮಂದಿ ಕೂಡ ಸೆಲ್ಫ್ ಕ್ವಾರೈಂಟೈನ್ ಆಗಲು ಮುಂದಾಗಿದ್ದು,
ಆಸ್ಪತ್ರೆಗೆ ಹೋಗುವುದಿಲ್ಲ ಅಂಥ ಅಧಿಕಾರಿಗಳಿಗೆ ತಿಳಿಸಿದ್ದಾರೆ ಅಂತ ತಿಳಿದು ಬಂದಿದೆ. ಇದೇ ವೇಳೆ ಅಪಾರ್ಟ್ಮೆಂಟ್ ಒಳಗೆ ಹೋಗುವ, ಬರುವ ಎಲ್ಲರೂ ಪ್ರತಿಯೊಂದು ಮಾಹಿತಿಯನ್ನು ನೀಡಬೇಕಾಗಿದೆ. ಇನ್ನೂ ಇಂದು ಸಂಜೆ ಇನ್ನೂ ಹಲವು ಮಂದಿಯ ಕರೋನ ಸೊಂಕಿ ವರದಿ ಬರಲಿದ್ದು, ಅಪಾರ್ಟ್ಮೆಂಟ್ನಲ್ಲಿ ಭಯದ ವಾತವಾರಣ ನಿರ್ಮಾಣವಾಗಿದೆ.