Saturday, April 17, 2021
Home ಸುದ್ದಿ ಜಾಲ ನಟಿ 'ಓವಿಯಾ ಹೆಲೆನ್' ವಿರುದ್ಧ ತಮಿಳುನಾಡಿನಲ್ಲಿ ಕೇಸ್ ದಾಖಲು

ಇದೀಗ ಬಂದ ಸುದ್ದಿ

ನಟಿ ‘ಓವಿಯಾ ಹೆಲೆನ್’ ವಿರುದ್ಧ ತಮಿಳುನಾಡಿನಲ್ಲಿ ಕೇಸ್ ದಾಖಲು

ಯಶ್ ಅಭಿನಯದ ಸೂಪರ್ ಹಿಟ್ ಚಿತ್ರ “ಕಿರಾತಕ” ನಾಯಕಿ ಓವಿಯಾ ಹೆಲನ್ ವಿರುದ್ಧ ತಮಿಳುನಾಡಿನಲ್ಲಿ ದೂರು ದಾಖಲಾಗಿದೆ.

ಓವಿಯಾ ವಿರುದ್ಧ ತಮಿಳುನಾಡಿನ ಬಿಜೆಪಿ ಸೈಬರ್ ಕ್ರೈಂಗೆ ದೂರು ಕೊಟ್ಟಿದ್ದು ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಿದ್ದ ವೇಳೆ “ಗೋ ಬ್ಯಾಕ್ ಮೋದಿ” ಎಂದು ಟ್ವೀಟ್ ಮಾಡಿದ್ದ ಓವಿಯಾ ವಿರುದ್ಧ ಬಿಜೆಪಿ ಪಕ್ಷ ದೂರು ದಾಖಲು ಮಾಡಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ತಮಿಳುನಾಡು ಭೇಟಿಯನ್ನು ವಿರೋಧಿಸಿ ಓವಿಯಾ ಶನಿವಾರ “ಗೋ ಬ್ಯಾಕ್ ಮೋದಿ” ಎಂದು ಟ್ವೀಟ್ ಮಾಡಿದ್ದರು. ವಿವಿಧ ಕಾರ್ಯಕ್ರಮಗಳು, ಯೋಜನೆಗಳ ಪ್ರಾರಂಭಕ್ಕಾಗಿ ಪ್ರಧಾನಿ ನಿನ್ನೆ ತಮಿಳುನಾಡಿಗೆ ಆಗಮಿಸಿದ್ದು ಆ ವೇಳೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಮೋದಿ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುವ ಮೂಲಕ ಅವರ ಭೇಟಿಯನ್ನು ವಿರೋಧಿಸಿದ್ದರು.

ಓವಿಯಾ ಕನ್ನಡದ “ಕಿರಾತಕ” ಚಿತ್ರವಲ್ಲದೆ “ಕಲಾವಣಿ” ಎಂಬ ತಮಿಳು ಚಿತ್ರ, ಕಮಲ್ ಹಾಸನ್ ಆಯೋಜಿಸಿದ್ದ ಬಿಗ್ ಬಾಸ್ ರಿಯಾಲಿಟಿ ಗೇಮ್ ಶೋನ ಉದ್ಘಾಟನಾ ಸೀಸನ್ ನಲ್ಲಿ ಭಾಗವಹಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

TRENDING