Tuesday, April 13, 2021
Home ಬೆಂಗಳೂರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿ.ಕೆ. ಶಿ ಪುತ್ರಿ ಐಶ್ವರ್ಯಾ ಹಾಗೂ ಎಸ್.ಎಂ.ಕೃಷ್ಣ ಮೊಮ್ಮಗ ಅಮರ್ಥ್ಯ ಹೆಗ್ಡೆ..!

ಇದೀಗ ಬಂದ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿ.ಕೆ. ಶಿ ಪುತ್ರಿ ಐಶ್ವರ್ಯಾ ಹಾಗೂ ಎಸ್.ಎಂ.ಕೃಷ್ಣ ಮೊಮ್ಮಗ ಅಮರ್ಥ್ಯ ಹೆಗ್ಡೆ..!

 ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ, ಕಾಫಿ ಡೇ ಮುಖ್ಯಸ್ಥ ದಿ. ಸಿದ್ದಾರ್ಥ್ ಮಗ ಅಮರ್ಥ್ಯ ಹೆಗ್ಡೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವೈಟ್​ ಫೀಲ್ಡ್ ಬಳಿಯ ಶೆರಟಾನ್​ನಲ್ಲಿ ಅದ್ದೂರಿ ಮದುವೆ ಸಮಾರಂಭ ನಡೆಯುತ್ತಿದ್ದು, ಐಶ್ವರ್ಯಾ ಮತ್ತು ಅಮರ್ಥ್ಯ ಹೆಗ್ಡೆಯ ವಿವಾಹಕ್ಕೆ ಹಲವು ಗಣ್ಯಾತಿಗಣ್ಯರು ಮತ್ತು ಮಠಾಧೀಶರು ಸಾಕ್ಷಿಯಾಗಿದ್ದಾರೆ.

ಈ ನವಜೋಡಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ದಂಪತಿ, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಕೆ.ಸುಧಾಕರ್, ಡಾ.ಜಿ.ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್, ವಿ.ಸೋಮಣ್ಣ ಸೇರಿ ಹಲವು ಗಣ್ಯರು ಶುಭ ಹಾರೈಸಿದರು.

TRENDING